ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಭ್ರಷ್ಟಾಚಾರ ಪಕ್ಷ ಎಂಬುದು ಬಹಿರಂಗವಾಗಿದೆ: ಮುರುಗೇಶ್​ ನಿರಾಣಿ - ಸಚಿವ ಮುರುಗೇಶ್​ ನಿರಾಣಿ

ಕಾಂಗ್ರೆಸ್​ ಭ್ರಷ್ಟಾಚಾರ ಪಕ್ಷ ಎಂಬುದು ಉಗ್ರಪ್ಪ ಮತ್ತು ಸಲೀಂ ಕಮಿಷನ್ ಮಾತುಕತೆಯಿಂದ ಬಹಿರಂಗವಾಗಿದೆ ಎಂದು ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.

murugesh-nirani-reaction-on-ugrappa-and-saleem-statement
ಸಚಿವ ಮುರುಗೇಶ್​ ನಿರಾಣಿ

By

Published : Oct 14, 2021, 10:00 AM IST

ಹಾವೇರಿ: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್​ ಎಂದು ಸಚಿವ ಮುರುಗೇಶ್ ನಿರಾಣಿ ಟೀಕಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇಡೀ ಜಗತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಒಪ್ಪಿಕೊಂಡಿದೆ. ಬೇರೆಯವರಿಂದ ಬುದ್ದಿ ಹೇಳಿಸಿಕೊಳ್ಳುವ ಪರಿಸ್ಥಿತಿ ನಮಗೆ ಬಂದಿಲ್ಲ ಎಂದರು.

ಉಗ್ರಪ್ಪ ಮತ್ತು ಸಲೀಂ ಕಮಿಷನ್ ಮಾತುಕತೆ ಕುರಿತು ಸಚಿವ ಮುರುಗೇಶ್​ ನಿರಾಣಿ ಹೇಳಿಕೆ

ಉಪ ಚುನಾವಣೆ: ಶಿವರಾಜ ಸಜ್ಜನ ಅವರು ದಿ.ಸಿಎಂ ಉದಾಸಿಯವರ ದತ್ತು ಪತ್ರರಿದ್ದಂತೆ. ಹಾನಗಲ್​ ಕ್ಷೇತ್ರದ ಮತದಾರರ ಆಶ್ರೀರ್ವಾದ ಬಿಜೆಪಿ ಮೇಲಿದೆ. ಉಪಚುನಾವಣೆಯಲ್ಲಿ ಸಜ್ಜನರ ಗೆಲುವು ಖಚಿತ ಎಂದು ನಿರಾಣಿ ಭವಿಷ್ಯ ನುಡಿದರು.

ಬಂಡಾಯ ಶಮನ: ಸಿ.ಆರ್​​.ಬಳ್ಳಾರಿಯವರಿಗೆ ಟಿಕೆಟ್​ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದರು. ಮನವೊಲಿಕೆ ನಂತರ ನಾಮಪತ್ರ ಹಿಂಪಡೆದಿದ್ದಾರೆ. ಯಾವುದೇ ಒತ್ತಾಯವಿಲ್ಲದೆ ಹಿರಿಯರ ಮಾತಿಗೆ ಬೆಲೆ ಕೊಟ್ಟಿದ್ದಾರೆ. ಅಲ್ಲದೆ, ಶಿವರಾಜ ಸಜ್ಜನರ ಪರ ಕೆಲಸ ಮಾಡುವುದಾಗಿ ಹೇಳಿದ್ದಾರೆ ಎಂದರು.

ABOUT THE AUTHOR

...view details