ಕರ್ನಾಟಕ

karnataka

ETV Bharat / state

ಹಾವೇರಿ: ಕತ್ತು ಸೀಳಿ ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ! - ಹಾವೇರಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ

ಹಾವೇರಿಯ ಮದಗಮಾಸೂರು ಕೆರೆ ಬಳಿ ಅಪರಿಚಿತ ವ್ಯಕ್ತಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

Murder of an unknown person at Haveri
ಮದಗಮಾಸೂರು ಕೆರೆ ಬಳಿ ಪರಿಚಿತ ವ್ಯಕ್ತಿಯ ಕೊಲೆ:..

By

Published : Jun 21, 2022, 8:52 AM IST

ಹಾವೇರಿ:ಕತ್ತು ಸೀಳಿ ಅಪರಿಚಿತ ವ್ಯಕ್ತಿಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಸಮೀಪದ ಮದಗಮಾಸೂರು ಕೆರೆ ಬಳಿ ನಡೆದಿದೆ. ಅಂದಾಜು 45 ವರ್ಷದ ವ್ಯಕ್ತಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ದುಷ್ಕರ್ಮಿಗಳು ಮೃತದೇಹವನ್ನು ಕೆರೆಯ ಕಂದಕಕ್ಕೆ ಎಸೆದು ಹೋಗಿದ್ದಾರೆ.

ಮದಗಮಾಸೂರು ಕೆರೆ ಬಳಿ ಪರಿಚಿತ ವ್ಯಕ್ತಿಯ ಕೊಲೆ:..

ಮೃತ ವ್ಯಕ್ತಿಯ ವಿಳಾಸ ಮತ್ತು ಹೆಸರು ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಸ್ಥಳಕ್ಕೆ ಡಿವೈಎಸ್​ಪಿ ಟಿ.ವಿ.ಸುರೇಶ, ಹಿರೇಕೆರೂರು ಪೊಲೀಸ್ ಠಾಣೆಯ ಪಿಎಸ್ಐ ವಸಂತ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರೇಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪ್ರವಾಸಿಗರಿಂದ ಕಂಗೊಳಿಸುತ್ತಿದ್ದ ಮದಗಮಾಸೂರು ಜಲಪಾತದ ಮೇಲ್ಬಾಗದಲ್ಲಿಯೇ ಕೊಲೆ ಮಾಡಲಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ:ವಿಜಯಪುರ: ಆಟೋಗೆ ಬಸ್ ಡಿಕ್ಕಿ, ವಿದ್ಯಾರ್ಥಿಗಳಿಗೆ ಗಾಯ

ABOUT THE AUTHOR

...view details