ಕರ್ನಾಟಕ

karnataka

ETV Bharat / state

52 ಲಕ್ಷ ವೆಚ್ಚದ ವಿದ್ಯುತ್ ಎಕ್ಸ್‌ಪ್ರೆಸ್‌ ಲೈನ್ ಕಾಮಗಾರಿ ಪರಿಶೀಲನೆ ನಡೆಸಿದ ಅಧಿಕಾರಿಗಳು - ವಿದ್ಯುತ್ ಎಕ್ಸ್‌ಪ್ರೆಸ್‌ ಲೈನ್ ಕಾಮಗಾರಿ ಪರಿಶೀಲನೆ

ಹರಿಹರ ನೀರು ಸರಬರಾಜು ಮುಖ್ಯ ಕೇಂದ್ರಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವ ಎಕ್ಸ್‌ಪ್ರೆಸ್‌ ಲೈನ್ ಕಾಮಗಾರಿಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Ranebennuru
Ranebennuru

By

Published : Jun 9, 2020, 6:21 PM IST

ರಾಣೆಬೆನ್ನೂರು:ತಾಲೂಕಿನ ಕವಲತ್ತು ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿರುವ ಹರಿಹರ ನೀರು ಸರಬರಾಜು ಮುಖ್ಯ ಕೇಂದ್ರಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವ ಸುಮಾರು 52 ಲಕ್ಷ ವೆಚ್ಚದ ಎಕ್ಸ್‌ಪ್ರೆಸ್‌ ಲೈನ್ ಕಾಮಗಾರಿಯನ್ನು ನಗರಸಭಾ ಸದಸ್ಯರು ಹಾಗೂ ಪೌರಾಯುಕ್ತೆ ಮತ್ತು ಇಂಜಿನಿಯರ್ ಗಳು ಪರಿಶೀಲಿಸಿದರು.

ಇದೇ ವೇಳೆ ಮಾತನಾಡಿದ ಪೌರಾಯುಕ್ತೆ ಎಸ್. ಲಕ್ಷ್ಮೀ ಅವರು, ಕವಲತ್ತು ಗ್ರಾಮದಲ್ಲಿರುವ ನಗರದ ನೀರು ಸರಬರಾಜು ಕೇಂದ್ರದಲ್ಲಿ ಹಲವು ವರ್ಷಗಳಿಂದ ನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಇದರಿಂದಾಗಿ ಮಳೆಗಾಲದಲ್ಲಿ ಅಥವಾ ಇತರೆ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಎದುರಾದರೆ ವಾಟರ್ ಪಂಪ್​ ಗಳು ಬಂದ್​ ಆಗಿ ನಗರಕ್ಕೆ ನೀರು ಸರಬರಾಜು ಮಾಡುವುದರಲ್ಲಿ ವ್ಯತ್ಯಯ ಉಂಟಾಗುತ್ತಿತ್ತು ಎಂದರು.

ಈಗ ಎಕ್ಸ್​​ಪ್ರೆಸ್​ ಲೈನ್ ಅಳವಡಿಸುವುದರ ಮೂಲಕ ನಿರಂತರ ವಿದ್ಯುತ್ ಸರಬರಾಜು ಮಾಡಿ ನಗರಕ್ಕೆ ನೀರಿನ ಸಮಸ್ಯೆಯನ್ನು ಎದುರಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಪ್ರಗತಿಯಲ್ಲಿರುವ ಕಾಮಗಾರಿಗೆ ಸುಮಾರು 52 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಹೆಸ್ಕಾಂ ಚೀಫ್ ಇಂಜಿನಿಯರ್ ನಿರಂತರ ವಿದ್ಯುತ್ ಯೋಜನೆಗೆ ಚಾಲನೆ ನೀಡಲು ಲಿಖಿತವಾಗಿ ಅನುಮೋದನೆ ನೀಡಿದ್ದಾರೆ ಎಂದರು. ಒಟ್ಟು 52 ಲಕ್ಷ ವೆಚ್ಚದ ಕಾಮಗಾರಿಯನ್ನು 2008-09 ನೇ ಸಾಲಿನಿಂದ 2015- 16ನೇ ಸಾಲಿನ ವರೆಗೆ ಒಟ್ಟು 40 ಲಕ್ಷ ಅಂದಾಜು ಪಟ್ಟಿಯನ್ನು ತಯಾರಿಸಿ ಕಾಮಗಾರಿಯನ್ನು ಕೈಗೊಳ್ಳಲಾಯಿತು. ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ತಕರಾರಿನಿಂದ ಕಾಮಗಾರಿಯು ಸ್ಥಗಿತ ಗೊಂಡಿತ್ತು.

ನಂತರ ಸದಸ್ಯರ ಮನವೊಲಿಸಿ ಈಗ ಉಳಿದ ಬಾಕಿ 12 ಲಕ್ಷ ಮೊತ್ತದ ಭರಿಸುವ ಮೂಲಕ 400 ಮೀಟರ್ ಕೇಬಲ್ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. ಅಲ್ಲದೆ ಚೀಫ್ ಆಫೀಸರ್ ಹೆಸ್ಕಾಂ ಅವರಿಂದ ನಿರಂತರ ವಿದ್ಯುತ್ ಮೇಲಿನ 10 ರಷ್ಟು ಮೇಲ್ವಿಚಾರಣೆ ಶುಲ್ಕವನ್ನು ಪಾವತಿಸಿ ಅನುಮೋದನೆಯನ್ನು ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details