ಕರ್ನಾಟಕ

karnataka

ETV Bharat / state

ಸಾರ್ವಜನಿಕರ ಸಮಸ್ಯೆ ಆಲಿಸಿದ ಸಂಸದ ಉದಾಸಿ: ಪರಿಹಾರದ ಭರವಸೆ - mp visit to villages

ಸಂಸದ ಶಿವಕುಮಾರ ಉದಾಸಿ ಇಂದು ಹಾನಗಲ್​ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆ ಆಲಿಸಿದರು. ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

mp-shivakumar-udasi-visit-to-villages-today
ಸಂಸದ ಶಿವಕುಮಾರ ಉದಾಸಿ

By

Published : Aug 29, 2020, 8:12 PM IST

ಹಾನಗಲ್: ನೆರೆ ಹಾವಳಿಯಿಂದ ಹಲವಾರು ಸಮಸ್ಯೆಗಳು ಉಂಟಾಗಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ, ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸೂಚಿಸುತ್ತೇನೆ ಎಂದು ಸಂಸದ ಶಿವಕುಮಾರ ಉದಾಸಿ ಭರವಸೆ ನೀಡಿದರು.

ಸಂಸದ ಶಿವಕುಮಾರ ಉದಾಸಿ

ತಾಲೂಕಿನ ಹಳ್ಳಿಗಳಿಗೆ ತೆರಳಿ, ಜನ ಸಂಪರ್ಕ ಸಭೆ ನಡೆಸಿ ಅವರು ಮಾತನಾಡಿದರು. ಈ ವೇಳೆ ಜನರ ಕುಂದು-ಕೊರತೆಗಳನ್ನು ಆಲಿಸಲಾಯಿತು. ತಾಲೂಕಿನ ಕಾಮನಹಳ್ಳಿ, ಗೊಟಗೋಡಿ, ಲಕ್ಷ್ಮೀಪುರ, ಹರಳಕೊಪ್ಪ, ಇನಾಂ ನೀರಲಗಿ, ಹುಲಗಿನಹಳ್ಳಿ, ಕೋಣನಕೊಪ್ಪ, ಕ್ಯಾಸನೂರು, ಮಡೂರು, ಅಜಗುಂಡಿಕೊಪ್ಪ, ಜಂಗಿನಕೊಪ್ಪ, ಹನುಮನಕೊಪ್ಪ, ಗೆಜ್ಜಿಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು.

ತಾಲೂಕಿನ ಬಹುತೇಕ ಗ್ರಾಮಸ್ಥರ ಬೇಡಿಕೆ ಒಂದೇ ಆಗಿತ್ತು. ಶುದ್ಧ ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕ ಹಾಗೂ ಕಳೆದ ವರ್ಷ ನೆರೆ ಹಾವಳಿಯಿಂದ ಆದ ಹಾನಿಗೆ ಪರಿಹಾರ ನೀಡುವಂತೆ ಮನವಿ ಮಾಡಿದರು.

ಕೆಲ ಜಟಿಲ ಸಮಸ್ಯೆಗಳನ್ನು ಬಗೆಹರಿಸಲು ಸ್ವಲ್ಪ ಸಮಯಾವಕಾಶ ಬೇಕು ಎಂದು ಸಂಸದ ಉದಾಸಿ ಈ ಸಂದರ್ಭದಲ್ಲಿ ಹೇಳಿದರು.

ABOUT THE AUTHOR

...view details