ಕರ್ನಾಟಕ

karnataka

ETV Bharat / state

ದೇಶದಲ್ಲಿ ಕಾಂಗ್ರೆಸ್​​ ಅಡ್ರೆಸ್​ಗೆ ಇಲ್ಲ, ಜೆಡಿಎಸ್​ ಆಟಕ್ಕುಂಟು ಲೆಕ್ಕಕ್ಕಿಲ್ಲ: ರೇಣುಕಾಚಾರ್ಯ ವಾಗ್ದಾಳಿ - mp renukacharya

ಡಿಕೆಶಿ ಮತ್ತು ಸಿದ್ದರಾಮಯ್ಯ ಸಿಎಂ ಖುರ್ಚಿಗಾಗಿ ಹೊಡೆದಾಡ್ತಿದ್ದಾರೆ, ದೇಶದಲ್ಲಿ ಕಾಂಗ್ರೆಸ್​​ ಅಡ್ರೆಸ್ ಇಲ್ಲ, ಜೆಡಿಎಸ್​ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

mp renukacharya outrage against congress and jds
ಎಂಪಿ ರೇಣುಕಾಚಾರ್ಯ ವಾಗ್ದಾಳಿ

By

Published : Oct 24, 2021, 9:45 PM IST

ಹಾನಗಲ್​/ಹಾವೇರಿ: ಬಿಜೆಪಿ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಲೋನಿ ಅಭಿವೃದ್ಧಿ ಆಗಿವೆ. ಈಗ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಹೊರಟಿದ್ದಾರೆ. ಅಲ್ಪಸಂಖ್ಯಾತರಿಗೂ ಇವರ ಬಗ್ಗೆ ಗೊತ್ತಾಗಿದೆ. ಜಾತಿ ರಾಜಕಾರಣ ಮಾಡಿದವರು ನೀವು ಎಂದು ಹಾನಗಲ್ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಪ್ರಚಾರ ನಡೆಸಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರಿಗೆ ಮೆದುಳು ಇಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ಸಿಎಂ ಖುರ್ಚಿಗಾಗಿ ಹೊಡೆದಾಡ್ತಿದ್ದಾರೆ. ರಾಹುಲ್ ಗಾಂಧಿ ಓಲೈಕೆಗಾಗಿ ಆರ್ ಎಸ್ ಎಸ್ ಬಯ್ಯುತ್ತಾರೆ. ದೇಶದಲ್ಲಿ ಕಾಂಗ್ರೆಸ್​​ಗೆ ಅಡ್ರೆಸ್ ಇಲ್ಲ ಎಂದ್ರು.

ಎಂಪಿ ರೇಣುಕಾಚಾರ್ಯ ವಾಗ್ದಾಳಿ

ಜೆಡಿಎಸ್ ಅಡ್ರೆಸ್ ಇಲ್ಲ, ಆಟಕ್ಕುಂಟು ಲೆಕ್ಕಕ್ಕಿಲ್ಲ.

ಕುಮಾರಸ್ವಾಮಿ ಅವರೇ ನಮ್ಮ ಸಂಸ್ಕೃತಿ, ಪರಂಪರೆ ಉಳಿದಿದೆ. ತಾವೊಮ್ಮೆ ನಮ್ಮ ಆರ್​ಎಸ್​ಎಸ್​ ಶಾಖೆಗೆ ಬನ್ನಿ, ಅಲ್ಲಿ ಏನು ಬೋಧನೆ ಮಾಡ್ತಾರೆ ಗೊತ್ತಾಗುತ್ತೆ. ಭಗವಾಧ್ವಜಕ್ಕೆ ನಮಸ್ಕಾರ ಮಾಡಿದ್ರೆ ಶಾಖೆ ಏನು ಕಲಿಸಿಕೊಡುತ್ತೆ ಗೊತ್ತಾಗುತ್ತೆ. ದೇವೇಗೌಡರಿಂದ ಹಿಡಿದು ಮರಿಮೊಮ್ಮಕ್ಕಳವರೆಗೂ ಖುರ್ಚಿಗಾಗಿ ಕೆಲಸ‌ ಮಾಡಿದ್ದಾರೆ. ಸಿದ್ದರಾಮಯ್ಯ ಹಿಂದೆ ಜೆಡಿಎಸ್​​ನಲ್ಲಿದ್ದಾಗ ಸೋನಿಯಾ, ರಾಹುಲ್ ಗಾಂಧಿ ಬಗ್ಗೆ ಕೆಟ್ಟ ಶಬ್ದಗಳನ್ನ ಬಳಸಿದ್ರಿ, ನಮ್ಮ ಬಳಿ ದಾಖಲೆಗಳಿವೆ. ಮತ್ತೊಮ್ಮೆ ಸಿಎಂ ಆಗಬೇಕು ಅಂತಾ ಹಗುರವಾಗಿ ಮಾತನಾಡ್ತಿದ್ದೀರಿ ಎಂದ್ರು.

ಯಡಿಯೂರಪ್ಪ ಯಾವತ್ತೂ ರಾಜಾಹುಲಿ:

ಯಡಿಯೂರಪ್ಪ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ. ಯಡಿಯೂರಪ್ಪ ಯಾರಿಗೂ ಜಗ್ಗಲ್ಲ, ಬಗ್ಗಲ್ಲ. ಅವರೊಬ್ಬ ಶಿಸ್ತಿನ ಸಿಪಾಯಿ. ಈ ವಯಸ್ಸಲ್ಲಿ ನಮ್ಮ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಕೊಡೋದಿಲ್ಲ. ಆರೋಗ್ಯ ಸರಿಯಿಲ್ಲದ್ದಕ್ಕೆ ಸಿಎಂ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ. ಹೀಗಾಗಿ ಇವತ್ತು ಬಂದಿದ್ದೇನೆ. ಡಿ.ಕೆ.ಶಿವಕುಮಾರ ಸುಳ್ಳು ಹೇಳ್ತಾರೆ ಎಂದು ದೂರಿದರು.

ABOUT THE AUTHOR

...view details