ಕರ್ನಾಟಕ

karnataka

ETV Bharat / state

ಬೈಕ್ ಸಮೇತ ನದಿಗೆ ಬಿದ್ದ ತಾಯಿ-ಮಗ : ಮುಂದುವರೆದ ಶೋಧ ಕಾರ್ಯ - Mother-son who fell into the river Dharma

ಕಂಚಿನೆಗಳೂರು ಗ್ರಾಮದಿಂದ ಕಾಡಶೆಟ್ಟಿಹಳ್ಳಿ ಗ್ರಾಮದತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಸದ್ಯ ಕಾರ್ಯಾಚರಣೆ ನಡೆಸಿ ನೀರಲ್ಲಿ ಬಿದ್ದ ಬೈಕ್‌ನ ಮೇಲಕ್ಕೆ ಎತ್ತಲಾಗಿದೆ..

Mother-son who fell into the river Dharma
ಬೈಕ್ ಸಮೇತ ನದಿಗೆ ಬಿದ್ದ ತಾಯಿ-ಮಗ

By

Published : Dec 8, 2020, 10:54 PM IST

ಹಾನಗಲ್ :ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದ ಬಳಿ ಬೈಕ್ ಸಮೇತ ಧರ್ಮಾ ನದಿಗೆ ತಾಯಿ ಮತ್ತು ಮಗ ಬಿದ್ದಿರುವ ಘಟನೆ ನಡೆದಿದೆ.

ಬೈಕ್ ಸಮೇತ ನದಿಗೆ ಬಿದ್ದ ತಾಯಿ-ಮಗ

ಧರ್ಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಬೈಕ್ ಸಮೇತ ಮಗ ಬಸವರಾಜ ಕುಂದೂರ (22) ಮತ್ತು ತಾಯಿ ಚನ್ನವ್ವ ಕುಂದೂರ (45) ಎಂಬುವರು ಬಿದ್ದಿದ್ದಾರೆ ಎನ್ನಲಾಗಿದೆ.

ಕಂಚಿನೆಗಳೂರು ಗ್ರಾಮದಿಂದ ಕಾಡಶೆಟ್ಟಿಹಳ್ಳಿ ಗ್ರಾಮದತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಸದ್ಯ ಕಾರ್ಯಾಚರಣೆ ನಡೆಸಿ ನೀರಲ್ಲಿ ಬಿದ್ದ ಬೈಕ್‌ನ ಮೇಲಕ್ಕೆ ಎತ್ತಲಾಗಿದೆ. ಸ್ಥಳದಲ್ಲಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನೀರು ಪಾಲಾದವರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಆಡೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

ABOUT THE AUTHOR

...view details