ಹಾವೇರಿ: ಲಾಕ್ಡೌನ್ ನಿಯಮ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದವರಿಗೆ ಪೊಲೀಸರು ಹಾಗೂ ಅಧಿಕಾರಿಗಳು ಲಾಠಿ ರುಚಿ ತೋರಿಸಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದಿದೆ.
ಸವಣೂರಲ್ಲಿ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಪ್ರಾರ್ಥನೆ: ಲಾಠಿ ರುಚಿ ತೋರಿಸಿದ ಪೊಲೀಸರು - ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು
ಹಾವೇರಿ ಪಟ್ಟಣದ ಎರಡು ಮಸೀದಿಗಳಲ್ಲಿ ಮೂವತ್ತಕ್ಕೂ ಅಧಿಕ ಜನರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಮತ್ತು ಪೊಲೀಸರು ದಾಳಿ ನಡೆಸಿ ಲಾಠಿ ರುಚಿ ತೋರಿಸಿದ್ದಾರೆ.
ಪಟ್ಟಣದ ಎರಡು ಮಸೀದಿಗಳಲ್ಲಿ ಮೂವತ್ತಕ್ಕೂ ಅಧಿಕ ಜನರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ರು. ಹೊರಗಡೆಯಿಂದ ಮಸೀದಿ ಗೇಟ್ ಹಾಕಿಕೊಂಡು ಒಳಗಡೆಗೆ ಪ್ರಾರ್ಥನೆಗೆ ಮುಂದಾಗಿದ್ರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸವಣೂರು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಹಾಗೂ ಸಿಪಿಐ ಶಶಿಧರ ನೇತೃತ್ವದ ತಂಡ, ಒಬ್ಬೊಬ್ಬರನ್ನ ಹೊರ ಹಾಕಿ ಲಾಠಿ ರುಚಿ ತೋರಿಸಿದ್ದಾರೆ. ಅಲ್ಲದೆ ಪ್ರಾರ್ಥನೆಗೆ ಬಂದಿದ್ದವರು ತಂದಿದ್ದ ಹತ್ತಕ್ಕೂ ಅಧಿಕ ಬೈಕ್ಗಳನ್ನ ಜಪ್ತಿ ಮಾಡಿದ್ದಾರೆ.
ಐದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ತಿಳಿಸಿ ಹೇಳಿದ್ರೂ ಕೂಡ ಹಠಕ್ಕೆ ಬಿದ್ದವರಂತೆ ಮೂವತ್ತಕ್ಕೂ ಅಧಿಕ ಜನರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿರುವುದು ದುರಂತವೇ ಸರಿ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
TAGGED:
mass prayer news