ಕರ್ನಾಟಕ

karnataka

ETV Bharat / state

ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಅನಿವಾರ್ಯ: ಯತ್ನಾಳ್ - ಸಿಎಂ ಬಿಎಸ್​ವೈ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ

ಸಿಎಂ ಬಿಎಸ್​ವೈ ಮತ್ತು ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಕಿಡಿಕಾರಿದ್ದು, ಮೇ 2 ರೊಳಗೆ ಸಿಎಂ ಬದಲಾವಣೆ ಖಚಿತ ಎಂದಿದ್ದಾರೆ.

MLA Yatnal slam BY Vijayendr
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

By

Published : Apr 11, 2021, 4:51 PM IST

ಹಾವೇರಿ:ಬಿ.ಎಸ್​ ಯಡಿಯೂರಪ್ಪ ಪುತ್ರ ವ್ಯಾಮೋಹದಿಂದ ತುಂಬಿ ತುಳುಕುತ್ತಿದ್ದಾರೆ. ಹೀಗಾಗಿ ಮಗನನ್ನು ಉಪಚುನಾವಣೆಗೆ ಬಿಟ್ಟಿದ್ದಾರೆ. ವಿಜಯೇಂದ್ರ ಬಳಿ ರೊಕ್ಕ ಇದ್ದು, ಹಂಚಲು ಅಲ್ಲಿ ಬಿಟ್ಟಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಬಳಿ ನಾಯಕತ್ವ ಗುಣವಿಲ್ಲ, ಸಾವಿರಾರು ಕೋಟಿ ದುಡ್ಡಿದೆ. ರಾಜ್ಯದಿಂದ ಅವರು ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಸದ್ಯದಲ್ಲೇ ಫೆಡರಲ್ ಬ್ಯಾಂಕ್ ಹಗರಣ ಹೊರ ಬರುತ್ತೆ ನೋಡಿ. ವಿದೇಶಿ ಬ್ಯಾಂಕ್​ಗಳಲ್ಲೂ ಅಪಾರ ಪ್ರಮಾಣದ ಹಣ ಇಟ್ಟಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

'ಅಧಿಕಾರಕ್ಕಾಗಿ ಹಣ ಹಂಚಲಾಗ್ತಿದೆ'

ಯಡಿಯೂರಪ್ಪ ಬಿಜೆಪಿ ಕಟ್ಟಿದಾಗ ಹಣ ಹಂಚುವ ಪರಿಸ್ಥಿತಿ ಇರಲಿಲ್ಲ. ನಾವೆಲ್ಲ ಅತಿ ಕಡಿಮೆ ಹಣದಲ್ಲಿ ಎಂಎಲ್ಎ, ಎಂಪಿ ಆಗಿದ್ದೇವೆ. ಈಗ ಯಡಿಯೂರಪ್ಪ ಕಾಲದಲ್ಲಿ ಹಣ ಹಂಚುವ ಪರಿಸ್ಥಿತಿ ಬಂದಿದೆ. ಇವತ್ತು ಎಂಪಿ ಆಗಬೇಕಾದರೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಬೇಕು. ಗ್ರಾಮ ಪಂಚಾಯತ್​ ಸದಸ್ಯ ಆಗಬೇಕೆಂದರೆ ಎರಡ್ಮೂರು ಲಕ್ಷ ರೂಪಾಯಿ ಖರ್ಚು ಮಾಡಬೇಕು ಎಂದರು.

'ಮೇ 2ರ ಒಳಗೆ ಸಿಎಂ ಬದಲಾವಣೆ ಖಚಿತ'

ಮೇ 2ರ ಒಳಗೆ ಸಿಎಂ ಬದಲಾವಣೆ ಆಗುತ್ತೆ. ಯತ್ನಾಳ್​ ಸಿಎಂ ಆಗ್ತಾರೋ ಅಥವಾ ಬೇರೆಯವರು ಆಗ್ತಾರೋ ಗೊತ್ತಿಲ್ಲ, ಬದಲಾವಣೆಯಂತೂ ಖಚಿತ.

ಕೋಡಿಹಳ್ಳಿ ವಿರುದ್ಧ ವಾಗ್ದಾಳಿ
ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಹದ್ದು ಮೀರಿ ಮಾತಾಡ್ತಿದ್ದಾರೆ. ನೌಕರರ ಮುಷ್ಕರಕ್ಕೂ ಅವರಿಗೂ ಸಂಬಂಧವೇ ಇಲ್ಲ. ಹೊರಗಿನವರನ್ನು ಅಧ್ಯಕ್ಷರನ್ನಾಗಿ ಮಾಡಿಕೊಳ್ಳಬೇಡಿ. ಕೆಲವರು ದೇಶ ಹಾಳು ಮಾಡುವವರು ಇದ್ದಾರೆ. ಇದರಿಂದ ಜನರಿಗೆ ತೊಂದರೆಯಾಗ್ತಿದೆ. ಸಾರಿಗೆ ನೌಕರರು ಎಲ್ಲರನ್ನೂ ಸರ್ಕಾರಿ ನೌಕರರನ್ನಾಗಿ ಮಾಡಿ ಹೇಳ್ತಿದ್ದಾರೆ. ನಾಳೆ ಐಪಿಎಸ್​, ಐಎಎಸ್​ ರೀತಿ ಸಂಬಳ ಕೊಡಿ ಎಂದು ಕೇಳ್ತಾರೆ. ಅದೆಲ್ಲ ಸಾಧ್ಯವಿಲ್ಲ. ನಾನೇ ಮುಖ್ಯಮಂತ್ರಿಯಾದರೂ ಆಗುವುದಿಲ್ಲ. ಸಾರಿಗೆ ಸಂಸ್ಥೆ ಸಾವಿರಾರು ಕೋಟಿ ರೂಪಾಯಿ ನಷ್ಟದಲ್ಲಿದೆ. ನಷ್ಟದಲ್ಲಿದ್ದರುವಾಗ ಸಂಬಳ ಹೇಗೆ ಹೆಚ್ಚಳ ಮಾಡ್ತಾರೆ..?, ಹೇಗೆ ಬೋನಸ್ ಕೊಡ್ತಾರೆ..? ಕೋಡಿಹಳ್ಳಿ ಚಂದ್ರಶೇಖರ್​ ಅಂಥವರು ಕಾರ್ಮಿಕರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಹೇಳಿದರು.

'ಸಾರಿಗೆ ಸಂಸ್ಥೆಯ ಭ್ರಷ್ಟಾಚಾರ ನಿಲ್ಲಿಸಿ'

ನಮ್ಮ‌ ಸರ್ಕಾರದವರಿಗೆ ಸಾರಿಗೆ ನೌಕರರ ಮುಷ್ಕರ ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲ. ಮೂರು ತಿಂಗಳ ಹಿಂದೆಯೇ ಆರನೇ ವೇತನ ಆಯೋಗ ಜಾರಿ, ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಬೇಕಿತ್ತು. ಸಂಸ್ಥೆ‌ ಲಾಭಕ್ಕೆ ಬಂದರೆ ಏನಾದರು ಮಾಡುತ್ತೇವೆ ಎಂದು ಹೇಳಬೇಕಿತ್ತು. ಸಣ್ಣಪುಟ್ಟ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಹೇಳಬೇಕಿತ್ತು. ಸಾರಿಗೆ ಸಂಸ್ಥೆಯಲ್ಲಿ ದೊಡ್ಡ ಭ್ರಷ್ಟಾಚಾರ ಆಗ್ತಿದೆ. ಮೊದಲು ಅದನ್ನು ನಿಲ್ಲಿಸಬೇಕು ಎಂದು ಹೇಳಿದರು.

'ವಿಜಯೇಂದ್ರ ಫೈಲ್ ಲೆಕ್ಕ ಹಾಕ್ತಾನೆ'

ಡಿ.ಕೆ ಶಿವಕುಮಾರ್​ ಮತ್ತು ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪ ಜೊತೆಗೆ ಹೊಂದಾಣಿಕೆಯಿಂದ ಇದ್ದಾರೆ. ಮುಂಜಾನೆ ವಿರೋಧ ಮಾಡ್ತಾರೆ. ರಾತ್ರಿ ವಿಜಯೇಂದ್ರ ಹೋಗಿ ಅವರಿಗೇನು ಸಮಾಧಾನ ಮಾಡಬೇಕೋ ಅದನ್ನು ಮಾಡ್ತಾರೆ. ಯಡಿಯೂರಪ್ಪ ಸರ್ಕಾರ ನಡೆಸುತ್ತಿಲ್ಲ. ವಿಜಯೇಂದ್ರ ಮತ್ತು ಅವರ ಕುಟುಂಬದವರು ಸರ್ಕಾರ ನಡೆಸುತ್ತಿದ್ದಾರೆ. ಯಡಿಯೂರಪ್ಪನವರು ಸಹಿ ಮಾಡ್ತಾರೋ ಇಲ್ಲವೋ ಎಂಬ ಸಂಶಯವಿದೆ. ವಿಜಯೇಂದ್ರನೇ ಯಡಿಯೂರಪ್ಪನವರ ಸಹಿ ಮಾಡ್ತಾರೋ ಎನ್ನುವ ಸಂಶಯವಿದೆ. ಯಡಿಯೂರಪ್ಪನವರಿಗೆ ಸಹಿ ಮಾಡಲು ಕೈ ನಡುಗುತ್ತದೆ. ಸಾವಿರಾರು ಫೈಲ್ ಇವೆ, ವಿಜಯೇಂದ್ರ ಬಂಗಾರದ ಅಂಗಡಿಯಲ್ಲಿ ಲೆಕ್ಕ ಹಾಕಿದಂತೆ ಫೈಲ್ ಲೆಕ್ಕ ಹಾಕ್ತಾನೆ. ಅಪ್ಪ ವಿಜಯೇಂದ್ರನನ್ನು ನೋಡಿ ಬಿ.ಎಸ್‌ ಯಡಿಯೂರಪ್ಪ ಎಂದು ಸಹಿ ಮಾಡ್ತಾರೆ ಎಂದು ದೂರಿದರು.

ABOUT THE AUTHOR

...view details