ಕರ್ನಾಟಕ

karnataka

ETV Bharat / state

ಸಂತ್ರಸ್ತರ ಬಳಿ ತೆರಳಿದ ಶಾಸಕ ವಿರೂಪಾಕ್ಷಪ್ಪ: ಮನೆ ಕಳೆದುಕೊಂಡವರಿಗೆ ಪರಿಹಾರದ ಭರವಸೆ - ಬಳ್ಳಾರಿ, ಜಿಲ್ಲೆಯ ನಾಗನೂರು ಗ್ರಾಮ

ಜಿಲ್ಲೆಯಲ್ಲಿ ನೆರೆ ಹಾವಳಿ ಮುಂದುವರೆದಿದ್ದು ಇದೀಗ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳ ಕಡೆ ಮುಖ ಮಾಡುತ್ತಿದ್ದಾರೆ. ಜನರ ಸಮಸ್ಯೆ ಆಲಿಸುವ ಸಲುವಾಗಿ ಜನಪ್ರತಿನಿಧಿಗಳು ಕ್ಷೇತ್ರ ಕಾರ್ಯ ಕೈಗೊಂಡಿದ್ದಾರೆ.

ಶಾಸಕ ವಿರುಪಾಕ್ಷಪ್ಪ

By

Published : Aug 11, 2019, 3:21 AM IST

ಹಾವೇರಿ: ಜಿಲ್ಲೆಯಲ್ಲಿ ನೆರೆ ಹಾವಳಿ ಮುಂದುವರೆದಿದ್ದು ಇದೀಗ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳ ಕಡೆ ಮುಖ ಮಾಡುತ್ತಿದ್ದಾರೆ. ಜನರ ಸಮಸ್ಯೆ ಆಲಿಸುವ ಸಲುವಾಗಿ ಜನಪ್ರತಿನಿಧಿಗಳು ಕ್ಷೇತ್ರ ಕಾರ್ಯ ಕೈಗೊಂಡಿದ್ದಾರೆ.

ಸಂತ್ರಸ್ತರ ಬಳಿ ತೆರಳಿದ ಶಾಸಕ ವಿರುಪಾಕ್ಷಪ್ಪ

ಬ್ಯಾಡಗಿ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲೆಯ ನಾಗನೂರು ಗ್ರಾಮಕ್ಕೆ ತೆರಳಿ ನೆರೆ ಹಾವಳಿ ಕುರಿತಂತೆ ಪರಿಶೀಲನೆ ನಡೆಸಿದರು. ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಅವರು, ಸರ್ಕಾರ ಶಾಶ್ವತ ಪರಿಹಾರ ಒದಗಿಸುವ ಚಿಂತನೆಯಲ್ಲಿದೆ ಎಂದು ತಿಳಿಸಿದರು.

ಮನೆ ಕಳೆದು ಕೊಂಡವರಿಗೆ ಹಾಗೂ ಜಮೀನುಗಳನ್ನು ಕಳೆದುಕೊಂಡವರಿಗೆ ಖಂಡಿತವಾಗಿ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಇನ್ನು ಹಾನಗಲ್ ತಾಲೂಕಿನ ವರ್ದಿ ಸೇರಿದಂತೆ ವಿವಿಧ ಗ್ರಾಮಗಳಿಗೆ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದ ಮಾನೆ, ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ABOUT THE AUTHOR

...view details