ಹಾವೇರಿ :ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಯವರು ಪಿತೂರಿ ಮಾಡುತ್ತಿದ್ದಾರೆ ಎಂದು ಶಾಸಕ ಶ್ರೀನಿವಾಸ್ ಮಾನೆ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ 3 ವರ್ಷಗಳಲ್ಲಿ ಅಭಿವೃದ್ದಿ ಮತ್ತು ಯೋಜನೆ ರೂಪಿಸುವ ವಿಚಾರದಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಅದಲ್ಲದೇ ಬರುವ ವರ್ಷ ವಿಧಾನಸಭೆ ಚುನಾವಣೆ ಬರುತ್ತಿದೆ, ಹೀಗಾಗಿ ಜನರ ಗಮನ ಬೇರೆಡೆ ಸೆಳೆಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ ಎಂದರು.
ಬಿಜೆಪಿ ಜನರ ಗಮನ ಬೇರೆಡೆ ಸೆಳೆಯಲು ವಿವಾದ ಸೃಷ್ಟಿ ಮಾಡುತ್ತಿದೆ: ಶ್ರೀನಿವಾಸ್ ಮಾನೆ - ಹಾವೇರಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಶಾಸಕ ಶ್ರೀನಿವಾಸ್ ಮಾನೆ ಹೇಳಿಕೆ
ರಾಜ್ಯದ ಜನ ಅಭಿವೃದ್ಧಿ, ಇತಿಹಾಸ, ಜಾತ್ಯತೀತತೆ, ನೆಲೆಗಟ್ಟಿನ ಮೇಲೆ ಒಗ್ಗೂಡಿರುವ ಜನ ತಪ್ಪಿತಸ್ಥರಿಗೆ ಬುದ್ದಿಕಲಿಸಲು ತಯಾರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತದಲ್ಲಿ ಬಡವನ ಬದುಕು ಸಂಪೂರ್ಣ ಕಷ್ಟಕರವಾಗಿದೆ ಎಂದು ಶ್ರೀನಿವಾಸ್ ಮಾನೆ ಆರೋಪಿಸಿದ್ದಾರೆ
![ಬಿಜೆಪಿ ಜನರ ಗಮನ ಬೇರೆಡೆ ಸೆಳೆಯಲು ವಿವಾದ ಸೃಷ್ಟಿ ಮಾಡುತ್ತಿದೆ: ಶ್ರೀನಿವಾಸ್ ಮಾನೆ ಶಾಸಕ ಶ್ರೀನಿವಾಸ್ ಮಾನೆ](https://etvbharatimages.akamaized.net/etvbharat/prod-images/768-512-14928693-thumbnail-3x2-msmss.jpg)
ರಾಜ್ಯದಲ್ಲಿ ಧರ್ಮದ ವಿಚಾರವನ್ನ ಮುಂಚೂಣಿಯಲ್ಲಿ ತಂದು, ಅಭಿವೃದ್ಧಿ ಹಿನ್ನೆಡೆ ವಿಚಾರವನ್ನ ಮರೆಮಾಚುವ ಕೆಲಸ ಮಾಡುತ್ತಿದೆ. ಬಿಜೆಪಿಯ ಈ ನಿಲುವನ್ನ ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಹಲವು ವರ್ಷಗಳಿಂದ ಇರುವ ಜಾತ್ಯತೀತತೆ ಪರಂಪರೆಯನ್ನ ಒಡೆಯುವ ಕೆಲಸವಾಗುತ್ತಿದೆ. ರಾಜ್ಯದ ಜನ ಅಭಿವೃದ್ಧಿ, ಇತಿಹಾಸ, ಜಾತ್ಯಾತೀತತೆ, ನೆಲೆಗಟ್ಟಿನ ಮೇಲೆ ಒಗ್ಗೂಡಿರುವ ಜನ ತಪ್ಪಿತಸ್ಥರಿಗೆ ಬುದ್ದಿಕಲಿಸಲು ತಯಾರಾಗಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತದಲ್ಲಿ ಬಡವನ ಬದುಕು ಸಂಪೂರ್ಣ ಕಷ್ಟಕರವಾಗಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು, ಆಗ ಬಡ ಜನರಿಗೆ ಶಕ್ತಿ ತುಂಬುವ ಕೆಲಸವಾಗುತ್ತದೆ ಎಂದರು.