ಕರ್ನಾಟಕ

karnataka

ETV Bharat / state

ಹಾನಗಲ್ ಕ್ಷೇತ್ರದಲ್ಲಿ ಜನಸ್ನೇಹಿ ಆಡಳಿತಕ್ಕೆ ಅಧಿಕಾರಿಗಳನ್ನ ಸಿದ್ಧಪಡಿಸಬೇಕಿದೆ : ಶಾಸಕ ಮಾನೆ - MLA Shrinivas Mane in Haveri

ಹಾನಗಲ್ ಕ್ಷೇತ್ರದಲ್ಲಿ (Hanagal Assembly) ಮೊದಲು ಆಡಳಿತ ಬಿಗಿಗೊಳಿಸುವುದಾಗಿ ತಿಳಿಸಿದರು. ಜನಸ್ನೇಹಿ ಆಡಳಿತಕ್ಕೆ ಅಧಿಕಾರಿಗಳನ್ನ ಸಿದ್ಧಪಡಿಸಬೇಕಿದೆ. ಸರ್ಕಾರ ನೀಡಿದ ಭರವಸೆಗಳನ್ನ ಕಾರ್ಯರೂಪಕ್ಕೆ ತರಲು ಮೊದಲ ಆದ್ಯತೆ ನೀಡುವುದಾಗಿ ಶಾಸಕ ಶ್ರೀನಿವಾಸ್‌ ಮಾನೆ( Mla Srinivas Mane) ತಿಳಿಸಿದರು..

ಶಾಸಕ ಶ್ರೀನಿವಾಸ್ ಮಾನೆ
ಶಾಸಕ ಶ್ರೀನಿವಾಸ್ ಮಾನೆ

By

Published : Nov 12, 2021, 6:38 PM IST

ಹಾವೇರಿ :ಮಳೆಯಿಂದಾಗಿ ಗುರುವಾರ ಪ್ರಮಾಣವಚನ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ. ಆದಷ್ಟು ಬೇಗ ಸಭಾಧ್ಯಕ್ಷರಿಂದ ಅನುಮತಿ ಪಡೆದು ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಶ್ರೀನಿವಾಸ್ ಮಾನೆ (Shrinivas Mane) ತಿಳಿಸಿದ್ದಾರೆ.

ಮಠಗಳಿಗೆ ಭೇಟಿ ನೀಡಿದ ಶಾಸಕ ಶ್ರೀನಿವಾಸ್ ಮಾನೆ

ಹಾವೇರಿಯಲ್ಲಿ ಮಾತನಾಡಿದ ಅವರು, ಹಾನಗಲ್ ಕ್ಷೇತ್ರದಲ್ಲಿ (Hanagal Assembly) ಮೊದಲು ಆಡಳಿತ ಬಿಗಿಗೊಳಿಸುವುದಾಗಿ ತಿಳಿಸಿದರು. ಜನಸ್ನೇಹಿ ಆಡಳಿತಕ್ಕೆ ಅಧಿಕಾರಿಗಳನ್ನ ಸಿದ್ಧಪಡಿಸಬೇಕಿದೆ. ಸರ್ಕಾರ ನೀಡಿದ ಭರವಸೆಗಳನ್ನ ಕಾರ್ಯರೂಪಕ್ಕೆ ತರಲು ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು.

ಹುಕ್ಕೇರಿ ಮಠಕ್ಕೆ ಮಾನೆ ಭೇಟಿ :ನೂತನವಾಗಿ ಶಾಸಕರಾಗಿ ಆಯ್ಕೆಯಾಗಿ ಹಾವೇರಿಗೆ ಬಂದಿದ್ದ ಶ್ರೀನಿವಾಸ ಮಾನೆ ಮಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಹಾವೇರಿಯ ಹುಕ್ಕೇರಿ ಮಠಕ್ಕೆ (Hukkeri Math) ಭೇಟಿ ನೀಡಿದ ಶ್ರೀನಿವಾಸ ಮಾನೆ, ಲಿಂಗೈಕ್ಯ ಉಭಯಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ಮಠದ ಶ್ರೀಗಳಾದ ಸದಾಶಿವಶ್ರೀಗಳಿಂದ ಆಶೀರ್ವಾದ ಪಡೆದರು.

ಸಿಂದಗಿ ಮಠದ ಶಾಂತವೀರ ಪಟ್ಟಾಧ್ಯಕ್ಷರ ಗದ್ದುಗೆಗೆ ಪೂಜೆ:ನಂತರ ಸಿಂದಗಿ ಮಠಕ್ಕೆ ತೆರಳಿದ ಶ್ರೀನಿವಾಸ ಮಾನೆ ಸಿಂದಗಿ ಮಠದ (Sindgai Math) ಶಾಂತವೀರ ಪಟ್ಟಾಧ್ಯಕ್ಷರ ಗದ್ದುಗೆಗೆ ಪೂಜೆ ಸಲ್ಲಿಸಿದರು. ಮಠಕ್ಕೆ ಭೇಟಿ ನೀಡಿದ ಶ್ರೀನಿವಾಸ ಮಾನೆಗೆ ಮಠದಿಂದ ಗೌರವಿಸಲಾಯಿತು.

ಮಠದ ವಟುಗಳ ಜೊತೆ ಸ್ವಲ್ಪ ಸಮಯ ಕಳೆದ ಮಾನೆ ನಂತರ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಓದಿ:ದೆಹಲಿಗೆ ಜಗದೀಶ್‌ ಶೆಟ್ಟರ್ ದೌಡು.. ಬಿಜೆಪಿ ಪಾಳಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..

ABOUT THE AUTHOR

...view details