ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಮೋಡ ಬಿತ್ತನೆಗೆ ಅವಕಾಶ ನೀಡುವಂತೆ ಡೀಸಿಗೆ ಪತ್ರ ಬರೆದ ಶಾಸಕ ಪ್ರಕಾಶ್ ಕೋಳಿವಾಡ್ - 2015 ರಲ್ಲಿ ಮೋಡ ಬಿತ್ತನೆ

ಮೋಡ ಬಿತ್ತನೆಗೆ ಅವಕಾಶ ಕೋರಿ ಶಾಸಕ ಪ್ರಕಾಶ್ ಕೋಳಿವಾಡ್ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

Letter to DC to allow cloud seeding
ಮೋಡ ಬಿತ್ತನೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದ ಶಾಸಕ ಪ್ರಕಾಶ್​ ಕೋಳಿವಾಡ

By

Published : Jun 23, 2023, 3:48 PM IST

Updated : Jun 23, 2023, 5:07 PM IST

ಶಾಸಕ ಪ್ರಕಾಶ್ ಕೋಳಿವಾಡ್ ಮಾಧ್ಯಮದವರ ಜೊತೆಗೆ ಮಾತನಾಡಿದರು.

ಹಾವೇರಿ: ರಾಜ್ಯದಲ್ಲಿ ದಿನದಿನಕ್ಕೆ ಕುಡಿಯುವ ನೀರಿನ ಕೊರತೆ ಹೆಚ್ಚಾಗಲಾರಂಭಿಸಿದೆ. ನಿರೀಕ್ಷಿಸಿದ ಮಟ್ಟಕ್ಕೆ ಆರಂಭದ ಮುಂಗಾರು ಮಳೆ ಸುರಿದಿಲ್ಲ. ಹಾವೇರಿ ಜಿಲ್ಲೆಯಲ್ಲಿಯೂ ಸಹ ಮಾನ್ಸೂನ್ ಮುಂಗಾರು ಆಗಮನ ತಡವಾಗಿದೆ. ಈ ಹಿನ್ನೆಲೆಯಲ್ಲಿ ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ್ ಅವರು, ಮೋಡ ಬಿತ್ತನೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ್ ಪುತ್ರ ಪ್ರಕಾಶ್ ತಮ್ಮದೇ ಪಿಕೆಕೆ ಇನಿಟೇಯಟಿವಿ ಸಂಸ್ಥೆ ಸ್ಥಾಪಿಸಿದ್ದು ಸ್ವಂತ ಮೋಡ ಬಿತ್ತನೆ ವಿಮಾನ ಹೊಂದಿದ್ದಾರೆ. ಜಿಲ್ಲಾಧಿಕಾರಿಗಳು ಪ್ರಯೋಗಾರ್ಥವಾಗಿ ನಡೆಸಲು ಅನುಮತಿ ನೀಡಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದು ಮೋಡಬಿತ್ತನೆ ವಿಮಾನ ಪರವಾನಗಿ ಪಡೆಯಲು ಎಲ್ಲ ಸಿದ್ದತೆ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಅನುಮತಿ ನೀಡಿದರೆ ಹಾವೇರಿ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಚಿತವಾಗಿ ಮೋಡಬಿತ್ತನೆ ಮಾಡುವುದಾಗಿ ಅವರು ತಿಳಿಸಿದ್ದಾರೆ.

ದೇಶದಲ್ಲಿ ಮೋಡ ಬಿತ್ತನೆಗೆ ಸಿದ್ದಪಡಿಸಿರುವ ಖಾಸಗಿ ವಿಮಾನಗಳು ನಮ್ಮ ಬಳಿ ಮಾತ್ರ ಇವೆ. ಸರ್ಕಾರ ಅನುಮತಿ ನೀಡಿದರೆ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸ್ವಂತ ಖರ್ಚಿನಲ್ಲಿಯೇ ಮೋಡ ಬಿತ್ತನೆ ಮಾಡುತ್ತೇನೆ. ಮೋಡ ಇದ್ದರೆ ಮಾತ್ರ ಮೋಡ ಬಿತ್ತನೆ ಮಾಡಲು ಬರುತ್ತೆ, ಅದರಿಂದ ಮಳೆಯಾಗುತ್ತೆ. 2015ರಲ್ಲಿಯೂ ಸಹ ಬರಗಾಲ ಬಂದಾಗ ನಾನು ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಿದ್ದೆ. ವಿಧಾನಸಭೆ ಚುನಾವಣೆ ವೇಳೆ ಈ ಕುರಿತಂತೆ ಜಿಲ್ಲೆಯ ಪ್ರಣಾಳಿಕೆಯಲ್ಲಿ ಸಹ ಅಂಶ ಸೇರಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಎಷ್ಟು ಮಳೆಯಾಗಬೇಕಿತ್ತೋ ಅಷ್ಟು ಮಳೆಯಾಗಿಲ್ಲ. ಮೇ 25ರಂದು ಕೇರಳಕ್ಕೆ ಆಗಮನವಾಗಬೇಕಿದ್ದ ಮುಂಗಾರು ತಡವಾಗಿದೆ. ಇದರಿಂದ ರಾಜ್ಯಕ್ಕೆ ಸಹ ಮುಂಗಾರು ತಡವಾಗಿ ಪ್ರವೇಶಿಸಿದೆ. ಈಗಾಗಿ ಮಳೆ ಆಶ್ರಯಿಸಿ ಜಮೀನುಗಳಲ್ಲಿ ಬಿತ್ತನೆ ಮಾಡಬೇಕಾಗಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಮೋಡಬಿತ್ತನೆ ಮಾಡಲು ನಮ್ಮ ಸಂಸ್ಥೆಗೆ ಅನುಮತಿ ನೀಡಿ ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಗಳು ಅನುಮತಿ ನೀಡುತ್ತಿದ್ದಂತೆ ಅದನ್ನು ದೆಹಲಿಯ ಕೇಂದ್ರ ಸರ್ಕಾರ ಹವಾಮಾನ ಇಲಾಖೆಗೆ ತಿಳಿಸಬೇಕು. ಇದಕ್ಕಾಗಿ ಸಂಸ್ಥೆಯ ಇಬ್ಬರು ಸಿಬ್ಬಂದಿ ಈಗಾಗಲೇ ದೆಹಲಿಯಲ್ಲಿದ್ದಾರೆ. ಈ ಎಲ್ಲ ಇಲಾಖೆಗಳ ಅನುಮತಿ ಸಿಕ್ಕರೆ ಜುಲೈ ಒಂದರಂದು ಜಿಲ್ಲೆಯಲ್ಲಿ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಲಾಗುವುದು. ವೈಯಕ್ತಿಕ ಖರ್ಚಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ಮಾತ್ರ ಮೋಡ ಬಿತ್ತನೆ ಕಾರ್ಯ ಮಾಡುತ್ತಿದ್ದೇನೆ. ದೇವರು ಶಕ್ತಿ ಕೊಟ್ಟರೆ ರಾಜ್ಯದ ತುಂಬ ಮೋಡ ಬಿತ್ತನೆ ಮಾಡುವುದಾಗಿ ಹೇಳಿದ ಅವರು, ತೇವಾಂಶ ಇರುವ ಮೋಡಗಳಿರುವಾಗ ಮೋಡಿ ಬಿತ್ತನೆ ಮಾಡಿದರೆ ಮಳೆಯಾಗುತ್ತದೆ ಎಂದಿದ್ದಾರೆ.

ನಮ್ಮ ಕಂಪನಿಯ ಕೆಲಸವೇ ಇದಾಗಿದ್ದರಿಂದ ನನಗೆ ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ ಸಾಧ್ಯವಾಗುತ್ತದೆ. ಬೇರೆಯವರಾದರೆ ಅಧಿಕ ಖರ್ಚಾಗುತ್ತದೆ. ಮೋಡ ಬಿತ್ತನೆ ಕಂಪನಿಗಳಿವೆ, ಆದರೆ ವಿಮಾನ ಇರುವುದು ನನ್ನ ಬಳಿ ಮಾತ್ರ. ಅಮೆರಿಕದಲ್ಲಿ ಮೋಡಬಿತ್ತನೆ ಮಾಡಿದ್ದ ವಿಮಾನ ತನ್ನ ಬಳಿ ಇದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ್ ಹೇಳಿದ್ದಾರೆ.

ಇದನ್ನೂಓದಿ:ಗುತ್ತಿಗೆದಾರರ ನಿಯೋಗದಿಂದ ಸಿಎಂ ಭೇಟಿ.. ಈಗಿನ ಸಚಿವ, ಶಾಸಕರು ಕಮಿಷನ್ ಕೇಳಿದರೆ ಅದನ್ನೂ ಬಹಿರಂಗ ಪಡಿಸುತ್ತೇವೆ: ಕೆಂಪಣ್ಣ

Last Updated : Jun 23, 2023, 5:07 PM IST

ABOUT THE AUTHOR

...view details