ಹಾವೇರಿ:ಶಾಸಕ ನೆಹರು ಓಲೇಕಾರ್ಗೆ ತಾಲೂಕಿನ ಕನವಳ್ಳಿ ಗ್ರಾಮಸ್ಥರು ಶುಕ್ರವಾರ ಭರ್ಜರಿ ಮೆರವಣಿಗೆ ನಡೆಸಿದರು.
ಶಾಸಕ ನೆಹರು ಓಲೇಕಾರ್ಗೆ ಆನೆ ಸವಾರಿ ಮೂಲಕ ಮೆರವಣಿಗೆ ಶಾಸಕ ನೆಹರು ಓಲೇಕಾರ್ ಅವರನ್ನು ಆನೆ ಮೇಲೆ ಕೂರಿಸಿ ಮೆರವಣಿಗೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರ ಕೈಗೆ ಬೆಳ್ಳಿ ಕತ್ತಿ, ತಲೆಗೆ ಬೆಳ್ಳಿ ಕಿರೀಟ ಹಾಕಿ ಸಂಭ್ರಮಿಸಿದರು. ಇದಕ್ಕೆಲ್ಲಾ ಕಾರಣ ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ನನೆಗುದಿಗೆ ಬಿದ್ದಿದ್ದ ಕೆರೆ ತುಂಬಿಸುವ ಕಾರ್ಯವನ್ನು ಶಾಸಕ ನೆಹರು ಓಲೇಕಾರ್ ಮಾಡಿದ್ದಾರೆ.
ಇನ್ನು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕಳೆದ ಹಲವು ವರ್ಷಗಳಿಂದ ಪಿವಿಸಿ ಪೈಪ್‌ಗಳು ಖಾಲಿ ಬಿದ್ದಿದ್ದವು. ಅವುಗಳನ್ನು ತಗೆದುಕೊಂಡು ಹೋಗಲು ಸಾಕಷ್ಟು ಕಾನೂನು ಸಮಸ್ಯೆಗಳಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳ ವಿರೋಧದ ನಡುವೆ ಓಲೇಕಾರ್ ಯುಟಿಪಿ ಕಾಲುವೆಯಿಂದ ಕೆರೆಗೆ ನೀರು ಹರಿಸಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.
ಶಾಸಕ ನೆಹರು ಓಲೇಕಾರ್ ಪ್ರತಿಷ್ಠೆಯನ್ನಾಗಿ ತಗೆದುಕೊಂಡು ನೀರು ಹರಿಸಿದ್ದಕ್ಕೆ ಗ್ರಾಮಸ್ಥರು ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆ ಮಾಡುವ ಮೂಲಕ ಸಂಭ್ರಮಿಸಿದರು.