ಹಾವೇರಿ :ಇಂದು ಆಯುಷ್ಯ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪತಿ ಮಾತ್ರೆಗಳನ್ನ ವಿತರಿಸಲಾಯಿತು.
ಜನರಿಗೆ ಹೋಮಿಯೋಪತಿ ಮಾತ್ರೆಗಳನ್ನು ವಿತರಿಸಿದ ಶಾಸಕ ನೆಹರು ಓಲೇಕಾರ್.. - MLA Neharu olekar
ಶಾಸಕ ನೆಹರು ಓಲೇಕಾರ್ ಮಾತ್ರೆಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, ಕೊರೊನಾ ಬರದಂತೆ ಈ ಮಾತ್ರೆಗಳು ತಡೆಯುತ್ತವೆ. ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ.
![ಜನರಿಗೆ ಹೋಮಿಯೋಪತಿ ಮಾತ್ರೆಗಳನ್ನು ವಿತರಿಸಿದ ಶಾಸಕ ನೆಹರು ಓಲೇಕಾರ್.. Haveri news](https://etvbharatimages.akamaized.net/etvbharat/prod-images/768-512-07:48-kn-hvr-05-tablet-distribution-7202143-01062020175133-0106f-1591014093-353.jpg)
Haveri news
ಶಾಸಕ ನೆಹರು ಓಲೇಕಾರ್ ಮಾತ್ರೆಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, ಕೊರೊನಾ ಬರದಂತೆ ಈ ಮಾತ್ರೆಗಳು ತಡೆಯುತ್ತವೆ. ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಪ್ರತಿಯೊಬ್ಬರು ಐದು ದಿನಗಳ ಕಾಲ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಅಲ್ಲದೆ ಬೇರೆ ರಾಜ್ಯಗಳಿಂದ, ಬೇರೆ ಜಿಲ್ಲೆಗಳಿಂದ ಯಾರೇ ಬಂದರೂ ಸಹ ಅವರ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ವಿವಿಧ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.