ಕರ್ನಾಟಕ

karnataka

ETV Bharat / state

ಹಾವೇರಿ ಪಟಾಕಿ ದುರಂತ ನಡೆದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು: ಶಾಸಕ ಬಸವರಾಜ್ ಶಿವಣ್ಣನವರ್ - ​ ETV Bharat Karnataka

ಆಕಸ್ಮಿಕವಾಗಿ ನಡೆದಿರುವ ಘಟನೆಯಿಂದ ಸಾರ್ವಜನಿಕ ಆಸ್ತಿಪಾಸ್ತಿ ಹಾಗು ಜೀವ ಹಾನಿ ಆಗಬಾರದು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಬಸವರಾಜ್ ಶಿವಣ್ಣನವರ್ ಹೇಳಿದ್ರು.

ಶಾಸಕ ಬಸವರಾಜ್ ಶಿವಣ್ಣನವರ್
ಶಾಸಕ ಬಸವರಾಜ್ ಶಿವಣ್ಣನವರ್

By ETV Bharat Karnataka Team

Published : Oct 8, 2023, 8:47 PM IST

ಶಾಸಕ ಬಸವರಾಜ್ ಶಿವಣ್ಣನವರ್ ಹೇಳಿಕೆ

ಹಾವೇರಿ : ಹಾವೇರಿ ಜಿಲ್ಲೆಯ ಆಲದಕಟ್ಟಿ ಗ್ರಾಮದಲ್ಲಿ ನಡೆದ ಪಟಾಕಿ ದುರಂತದಿಂದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು ಎಂದು ಹಾವೇರಿ ಜಿಲ್ಲೆ ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಂತೆ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಠಿಣ ನಿಯಮಗಳನ್ನು ತಕ್ಷಣಕ್ಕೆ ಜಾರಿಗೆ ತರುವುದು ಕಷ್ಟ. ರಾಜ್ಯದೆಲ್ಲೆಡೆ ಇರುವ ಅಧಿಕಾರಿಗಳಿಗೆ ಈ ಸಂಬಂಧ ಸರ್ಕಾರ ಎಚ್ಚರಿಕೆ ಕೊಟ್ಟಿದೆ ಎಂದು ತಿಳಿಸಿದರು.

ಇತ್ತೀಚೆಗೆ ಆಲದಕಟ್ಟಿ ಗ್ರಾಮದಲ್ಲಿ ನಡೆದ ಪಟಾಕಿ ದುರಂತ ಮಾರನೇಯ ದಿನ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ ಹಾವೇರಿಯಷ್ಟೇ ಅಲ್ಲಾ ರಾಜ್ಯದಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಆಲದಕಟ್ಟಿ ಘಟನೆ ನಡೆದು 38 ದಿನಗಳಾಗುವಷ್ಟರದಲ್ಲಿ ಬೆಂಗಳೂರಿನ ಅತ್ತಿಬೆಲೆಯಲ್ಲಿ ಪಟಾಕಿ ದುರಂತ ಸಂಭವಿಸಿ 14 ಜನ ಸಾವನ್ನಪ್ಪಿದ್ದಾರೆ ಎಂದು ಪಟಾಕಿ ದುರಂತದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಿವಣ್ಣನವರ್ ಉತ್ತರಿಸಿದರು.

ರಾಜ್ಯ ಸರ್ಕಾರ ಈ ಕುರಿತಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ರೀತಿ ಘಟನೆಗಳಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಇಂತಹ ಘಟನೆಗಳು ಹೇಳಿಕೇಳಿ ಸಂಭವಿಸುವುದಿಲ್ಲ. ಅಕಸ್ಮಿಕವಾಗಿ ನಡೆಯುವ ಇಂತಹ ಘಟನೆಗಳಿಂದ ಪ್ರಾಣಿಹಾನಿ ಆಸ್ತಿ ಹಾನಿಯಾಗುವುದು ನಮಗೂ ಸಹ ನೋವಿನ ಸಂಗತಿ. ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಯೋಗ್ಯವಾದ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ ಎಂಬ ಭರವಸೆ ಇದೆ ಎಂದು ಹೇಳಿದರು.

ಇದೇ ತಿಂಗಳ 9 ರಿಂದ ಮೂರು ದಿನಗಳ ಕಾಲ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಎಸ್​ಜೆಜೆಎಂ ಕ್ರೀಡಾಂಗಣದಲ್ಲಿ 14 ಮತ್ತು 17 ವರ್ಷದ ವಯೋಮಿತಿಯೊಳಗಿನ ಬಾಲಕ ಬಾಲಕಿಯರು ಬೆಳಗಾವಿ ವಿಭಾಗಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳು ನಡೆಯುತ್ತವೆ. ಪಂದ್ಯಾವಳಿಯಲ್ಲಿ ಏಳು ಜಿಲ್ಲೆಗಳು ಮತ್ತು ಎರಡು ಶೈಕ್ಷಣಿಕ ಜಿಲ್ಲೆಗಳ ಕ್ರೀಡಾಪಟುಗಳು 432 ಕ್ರೀಡಾಪಟುಗಳು, ನೂರು ಜನ ವ್ಯವಸ್ಥಾಪಕರು, 250 ಮೇಲ್ವಿಚಾರಕರು, ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಅತಿಥಿಗಳಿಗೆ ವಿಶೇಷ ಆತಿಥ್ಯ ನೀಡುವುದಾಗಿ ಶಾಸಕ ಶಿವಣ್ಣನವರ್ ಮಾಹಿತಿ ನೀಡಿದರು.

ಪಟಾಕಿ ದುರಂತ ರೀತಿ ಮುಂದೆ ನಡೆಯದಂತೆ ಎಚ್ಚರ ವಹಿಸಬೇಕು : ಅತ್ತಿಬೆಲೆಯಲ್ಲಿ ನಡೆದ ಪಟಾಕಿ ಗೋದಾಮಿನ ಅಗ್ನಿ ದುರಂತ ಅತ್ಯಂತ ದುರದೃಷ್ಟಕರ ಘಟನೆಯಾಗಿದೆ. ಮುಗ್ಧ ಕಾರ್ಮಿಕರು ಸಾವನ್ನಪ್ಪಿದ್ದು, ನನಗೆ ಬಹಳ ವೇದನೆ ಉಂಟು ಮಾಡಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಂಗ್ರಹ, ಮಾರಾಟದ ಬಗ್ಗೆ ಸರ್ಕಾರ ಅತ್ಯಂತ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ಮೃತ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರ ನೆರವು ನೀಡಿರುವುದು ಒಂದೆಡೆ, ಮತೊಂದೆಡೆ ಇಂಥ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಹದ್ದಿನ ಕಣ್ಣು ಇಡಬೇಕು ಎಂದು ಮಾಜಿ ಸಿಎಂ ಹೆಚ್.​ಡಿ ಕುಮಾರಸ್ವಾಮಿ ಅವರು ಬಿಡದಿಯ ತಮ್ಮ ತೋಟದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡುವಾಗ ಸರ್ಕಾರಕ್ಕೆ ಸಲಹೆ ನೀಡಿದರು.

ಇದನ್ನೂ ಓದಿ :ಅತ್ತಿಬೆಲೆ ಪಟಾಕಿ ದುರಂತ: ಎಫ್​ಐಆರ್ ದಾಖಲು, ಅಂಗಡಿ ಮಾಲೀಕ - ಪುತ್ರನ ಬಂಧನ - ಡಿಜಿಪಿ ಅಲೋಕ್ ಮೋಹನ್‌ ಮಾಹಿತಿ

ABOUT THE AUTHOR

...view details