ರಾಣೆಬೆನ್ನೂರು: ಮಹಿಳೆಯೊಬ್ಬರು ಏಕಾಏಕಿ ಜ್ವರ ಕಾಣಿಸಿಕೊಂಡು ಮೃತಪಟ್ಟ ಹಿನ್ನೆಲೆ, ಭಯಗೊಂಡಿದ್ದ ಕುದರಿಹಾಳ ಗ್ರಾಮಕ್ಕೆ ಶಾಸಕ ಅರುಣಕುಮಾರ ಪೂಜಾರ ಭೇಟಿ ನೀಡಿ, ಜನರಿಗೆ ಧೈರ್ಯ ತುಂಬಿದರು.
ಈ ಗ್ರಾಮಕ್ಕೆ ತೆರಳಿ ಜನರಿಗೆ ಧೈರ್ಯ ತುಂಬಿದ ರಾಣೆಬೆನ್ನೂರು ಶಾಸಕ - ರಾಣೆಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮ
ರಾಣೆಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ಮೂವತ್ತೈದು ವರ್ಷದ ಮಹಿಳೆ ಜ್ವರದಿಂದ ಮೃತಪಟ್ಟಿದ್ದರು. ಇವರು ಮಾರಕ ಕೊರೊನಾದಿಂದ ಸಾವನ್ನಪ್ಪಿರಬಹದು ಎಂದು ಶಂಕಿಸಿದ ಕಾರಣ ಗ್ರಾಮಸ್ಥರು ಭಯಗೊಂಡಿದ್ದರು. ಹಾಗಾಗಿ ಶಾಸಕ ಅರುಣಕುಮಾರ ಪೂಜಾರ ಭೇಟಿ ನೀಡಿ, ಜನರಿಗೆ ಧೈರ್ಯ ತುಂಬಿದರು.
ನಿನ್ನೆ ರಾಣೆಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ಮೂವತ್ತೈದು ವರ್ಷದ ಮಹಿಳೆ ಮೃತಪಟ್ಟಿದ್ದರು. ಇವರು ಮಾರಕ ಕೊರೊನಾದಿಂದ ಸಾವನ್ನಪ್ಪಿರಬಹದು ಎಂದು ಶಂಕಿಸಿದ ಕಾರಣ ಗ್ರಾಮಸ್ಥರು ಭಯಗೊಂಡಿದ್ದರು. ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸರ ಜತೆ ಗ್ರಾಮಕ್ಕೆ ತೆರಳಿದ ಶಾಸಕರು ಗ್ರಾಮದಲ್ಲಿ ಯಾವುದೇ ಕೊರೊನಾ ಬಂದಿಲ್ಲ. ಇದು ಕೇವಲ ಊಹಾಪೋಹ. ಜನರು ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ಕೆಲಸಗಳನ್ನು ಮತ್ತು ಕೃಷಿಕಾಯಕವನ್ನು ಮಾಡಿಕೊಂಡು ಹೋಗಬೇಕು, ಹೊರತು ಯಾರೊಬ್ಬರೂ ಗಾಬರಿಗೊಳ್ಳಬಾರದು ಎಂದರು.
ತಾಲೂಕಿನಲ್ಲಿ ಇಂದಿಗೂ ಸಹ ಯಾವುದೇ ಕೊರೊನಾ ಪ್ರಕರಣಗಳು ಕಂಡುಬಂದಿಲ್ಲ. ಇದಕ್ಕೆ ನಾವು ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಧನ್ಯವಾದ ಸಲ್ಲಿಸಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸಂತೋಷ ಕುಮಾರ, ಇಓ ಶ್ಯಾಮಸುಂದರ ಕಾಂಬಳೆ, ಡಿಎಸ್ಪಿ ಟಿ.ವಿ. ಸುರೇಶ, ಸಿಪಿಐ ಸುರೇಶ ಸಗರಿ ಗ್ರಾಮಕ್ಕೆ ಭೇಟಿ ನೀಡಿದರು.