ರಾಣೆಬೆನ್ನೂರು:ಕಾರ್ಮಿಕ ಇಲಾಖೆಯಿಂದ ತಾಲೂಕಿನ ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ಗಳನ್ನು ಶಾಸಕ ಅರುಣಕುಮಾರ ಪೂಜಾರ ವಿತರಿಸಿದರು.
ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ಅರುಣಕುಮಾರ ಪೂಜಾರ - distributes groceries kit
ಕಾರ್ಮಿಕ ಇಲಾಖೆಯಿಂದ ರಾಣೆಬೆನ್ನೂರು ತಾಲೂಕಿನ ಗಂಗಾಜಲ ತಾಂಡ, ಸಿದ್ದಾಪುರ ತಾಂಡ, ಬಸಲಿಕಟ್ಟಿ ತಾಂಡಗಳು ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿರುವ ಕಾರ್ಮಿಕರಿಗೆ ದಿನಸಿಗಳನ್ನು ವಿತರಿಸಲಾಯಿತು.
ತಾಲೂಕಿನ ಗಂಗಾಜಲ ತಾಂಡ, ಸಿದ್ದಾಪುರ ತಾಂಡ, ಬಸಲಿಕಟ್ಟಿ ತಾಂಡಗಳು ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿರುವ ಕಾರ್ಮಿಕರಿಗೆ ದಿನಸಿಗಳನ್ನು ವಿತರಿಸಲಾಯಿತು. ನಂತರ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಲಾಕಡೌನ್ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಕೆಲಸವಿಲ್ಲದೆ ಜೀವನ ಸಾಗಿಸಲು ಕಷ್ಟವಾಗಿತ್ತು. ಇದನ್ನು ಮನಗಂಡ ರಾಜ್ಯ ಸರ್ಕಾರ ಈಗಾಗಲೇ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಐದು ಸಾವಿರ ಪರಿಹಾರ ಧನವನ್ನು ಕಾರ್ಮಿಕರ ಖಾತೆಗೆ ಜಮಾ ಮಾಡಿದೆ. ಇದರ ಜತೆಗೆ ತಾಲೂಕಿನಲ್ಲಿ ಸುಮಾರು ಮೂರು ಸಾವಿರ ದಿನಸಿ ಕಿಟ್ಗಳನ್ನು ಬಡ ಕಾರ್ಮಿಕರಿಗೆ ನೀಡಲಾಗುತ್ತಿದೆ ಎಂದರು.
ಇನ್ನು, ಈ ಸಮಯದಲ್ಲಿ ಬಿಜೆಪಿ ಮುಖಂಡರಾದ ಚೋಳಪ್ಪ ಕಸವಾಳ, ಬಸವರಾಜ ಹುಲ್ಲತ್ತಿ, ದೇವೆಂದ್ರಪ್ಪ ನಾಯಕ, ಮಂಜುನಾಥ ಓಲೇಕಾರ ಹಾಜರಿದ್ದರು.