ಹಾವೇರಿ:ನಗರದ ಸಮೀಪದ ನೆಲೋಗಲ್ ಗ್ರಾಮದ ಬಳಿ ಸಚಿವ ಸುರೇಶ್ಕುಮಾರ್ ರೈತನಿಗೆ ಸನ್ಮಾನಿಸುವ ಮೂಲಕ ರೈತ ದಿನಾಚರಣೆ ಮಾಡಿದ್ದಾರೆ.
ಅನ್ನದಾತನನ್ನು ಸನ್ಮಾನಿಸಿ ರೈತ ದಿನಾಚರಣೆ ಮಾಡಿದ ಸಚಿವ ಸುರೇಶ್ಕುಮಾರ್ - ಹಾವೇರಿ ಸಚಿವ ಸುರೇಶ್ಕುಮಾರ್ ರೈತ ದಿನಾಚರಣೆ
ಹಾವೇರಿ ಸಮೀಪದ ನೆಲೋಗಲ್ ಗ್ರಾಮದ ಬಳಿ ಸಚಿವ ಸುರೇಶ್ಕುಮಾರ್ ರೈತನಿಗೆ ಸನ್ಮಾನಿಸುವ ಮೂಲಕ ರೈತ ದಿನಾಚರಣೆ ಮಾಡಿದ್ದಾರೆ.
ಸಚಿವರು ನೆಲೋಗಲ್ ಶಾಲೆಗೆ ಭೇಟಿ ನೀಡುವ ಮುನ್ನ ಜಮೀನಿನಲ್ಲಿರುವ ರೈತನಿಗೆ ಶಾಲು ಹೊದೆಸಿ ಕಾಲಿಗೆ ನಮಸ್ಕರಿಸಿದ ಪೋಟೋ ಇದೀಗ ವೈರಲ್ ಆಗಿದೆ. ಚೆನ್ನಬಸನಗೌಡ ಹೊಂಬರಡಿ ಎಂಬ ರೈತನಿಗೆ ಸುರೇಶಕುಮಾರ್ ಶಾಲು ಹೊದಿಸಿ ಸನ್ಮಾನಿಸುವ ಮೂಲಕ ರೈತ ದಿನ ಆಚರಿಸಿದ್ದಾರೆ. ಸಚಿವರು ಈ ರೀತಿ ರೈತ ದಿನಾಚರಣೆ ಆಚರಿಸಿದ್ದು, ಜಿಲ್ಲೆಯ ರೈತರಿಗೆ ಸಂತಸ ತಂದಿದೆ.
ಇನ್ನು ಸಚಿವರ ಕಾರ್ಯಕ್ಕೆ ಅನ್ನದಾತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸಚಿವ ಸ್ಥಾನ ಹುದ್ದೆಗಳೆಲ್ಲಾ ಬಿಟ್ಟು ರೈತ ಚೆನ್ನಬಸನಗೌಡ ತನ್ನನ್ನು ಸನ್ಮಾನಿಸಿದ್ದಕ್ಕೆ ಸುರೇಶ್ಕುಮಾರ್ ನಡೆ ಕಂಡು ಸನ್ಮಾನಿತ ರೈತ ಸಂತಸ ವ್ಯಕ್ತಪಡಿಸಿದ್ದಾರೆ. ತಾನು ರೈತನಾಗಿದ್ದಕ್ಕೂ ಸಾರ್ಥಕವಾಯಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
TAGGED:
ರೈತ ದಿನಾಚರಣೆ ಸುರೇಶ್ಕುಮಾರ್