ಹಾವೇರಿ:ಅತಿವೃಷ್ಠಿಯಲ್ಲಿ ಮನೆ ಕಳೆದುಕೊಂಡವರನ್ನು ಬಿಟ್ಟು ಮನೆ ಹಾಳಾಗದವರಿಗೆ ಪರಿಹಾರ ಬಿಡುಗಡೆ ಮಾಡಿದ್ದರೆ, ಅದಕ್ಕಿಂತ ಪಾಪದ ಕೆಲಸ ಮತ್ತೊಂದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಮಾತನಾಡಿದ ಅವರು ಅತಿವೃಷ್ಠಿಯಲ್ಲಿ ಮನೆ ಕಳೆದುಕೊಂಡವರನ್ನು ಬಿಟ್ಟು ಮನೆ ಹಾಳಾಗದವರಿಗೆ ಪರಿಹಾರ ಬಿಡುಗಡೆ ಮಾಡಿದವರ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು. ಜಿಲ್ಲೆಯಲ್ಲಿ ಅತಿವೃಷ್ಠಿ ಮನೆ ಪರಿಹಾರ ನೀಡಲು ಲಂಚ ಪಡೆಯಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ರೀತಿಯ ಆರೋಪವನ್ನ ಇದೇ ಪ್ರಥಮ ಬಾರೆಗೆ ಕೇಳುತ್ತಿದ್ದೇನೆ ಎಂದು ಉತ್ತರಿಸಿದರು.
ನಾನು ಸಹ ಚಾಮರಾಜನಗರ,ಹಾಸನ,ರಾಯಚೂರು, ಮೈಸೂರು, ತುಮಕೂರು ಬೆಂಗಳೂರು ಜಿಲ್ಲೆಯ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಅಧಿಕಾರಿಗಳು ಈ ರೀತಿ ಅತಿವೃಷ್ಠಿಯಲ್ಲಿ ಹಣ ಕೇಳುತ್ತಿದ್ದಾರೆ ಎಂಬುವುದನ್ನು ನಾನು ಕೇಳಿಲ್ಲಾ ಈ ರೀತಿ ಅವ್ಯವಹಾರವಾಗಿದ್ದರೆ ಎರಡು ದಿನಗಳಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಚಿವ ಸೋಮಣ್ಣ ತಿಳಿಸಿದರು.