ಹಾವೇರಿ: ಮಾಜಿ ಸಚಿವ ಹೆಚ್. ವಿಶ್ವನಾಥ್ ಟಿಪ್ಪು ಸುಲ್ತಾನ್ ಕುರಿತು ಹೇಳಿಕೆ ನೀಡಿರುವುದು ತಮಗೆ ತಿಳಿದಿಲ್ಲ. ಈ ಕುರಿತಂತೆ ತಿಳಿದುಕೊಂಡು ನಂತರ ಉತ್ತರಿಸುತ್ತೇನೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ಹೆಚ್. ವಿಶ್ವನಾಥ್ ಟಿಪ್ಪು ಸುಲ್ತಾನ್ ಕುರಿತು ಹೇಳಿಕೆ ನೀಡಿರುವುದು ತಿಳಿದಿಲ್ಲ: ಸಚಿವ ಹೆಬ್ಬಾರ್
ಹಾವೇರಿ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಮಣಿವಣ್ಣನ್ ವರ್ಗಾವಣೆ ಕುರಿತಂತೆ ಮಾತನಾಡಿದರು.
ಸಚಿವ ಶಿವರಾಮ್ ಹೆಬ್ಬಾರ್
ಹಾವೇರಿ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು, ಮಣಿವಣ್ಣನ್ ವರ್ಗಾವಣೆ ಕುರಿತಂತೆ ಮಾತನಾಡಿದರು. ಇದೊಂದು ಸಹಜ ಪ್ರಕ್ರಿಯೆ. ಅಧಿಕಾರಿಗಳ ವರ್ಗಾವಣೆ, ನಿಯೋಜನೆ ಸಹಜವಾದುದು ಎಂದರು. ಮಣಿವಣ್ಣನ್ ಒಳ್ಳೆಯ ಅಧಿಕಾರಿ. ಅವರ ಸೇವೆಯನ್ನು ಎಲ್ಲಿ ಪಡೆಯಬೇಕು ಅಲ್ಲಿ ಪಡೆಯಲಾಗುತ್ತದೆ ಎಂದು ಹೇಳಿದರು.
ಇನ್ನು ಕಾರ್ಮಿಕ ಇಲಾಖೆಯ ಸಮಸ್ಯೆಗಳ ಕುರಿತಂತೆ ಜಿಲ್ಲಾವಾರು ಪ್ರವಾಸ ಕೈಗೊಂಡಿದ್ದೇನೆ. ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳ ಕುರಿತಂತೆ ಚರ್ಚಿಸಿ ಏನು ಮಾರ್ಪಾಡುಗಳನ್ನು ಮಾಡಬೇಕು ಅದನ್ನು ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.