ಕರ್ನಾಟಕ

karnataka

ETV Bharat / state

ದೇಶದ ಗೌರವಕ್ಕೆ ಯಾರು ಧಕ್ಕೆ ತರುತ್ತಾರೋ, ಅವರನ್ನು ಬಂಧಿಸಬೇಕಾಗುತ್ತದೆ: ಸಚಿವ ಹೆಬ್ಬಾರ್

ದೇಶದ್ರೋಹಿ ಸಂಘಟನೆಗಳಲ್ಲಿ ಭಾಗಿಯಾಗುವವರು ಯಾವುದೇ ಜಾತಿ, ಧರ್ಮಕ್ಕೆ ಸೇರಿರಲಿ ಅವರನ್ನು ಬಂಧಿಸಬೇಕಾಗುತ್ತದೆ ಎಂದು ಸಚಿವ ಹೆಬ್ಬಾರ್​ ಹೇಳಿದ್ದಾರೆ. ಪಿಎಫ್​ಐ ಸಂಘಟನೆಯನ್ನು ಬ್ಯಾನ್ ಮಾಡಬೇಕೋ ಅಥವಾ ಬೇಡವೋ ಎಂಬುದನ್ನು ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಹಾವೇರಿಯಲ್ಲಿ ಸಚಿವ ಬಿ ಸಿ ಪಾಟೀಲ್​ ಹೇಳಿದ್ದಾರೆ.

ಸಚಿವ ಹೆಬ್ಬಾರ್
ಸಚಿವ ಹೆಬ್ಬಾರ್

By

Published : Sep 27, 2022, 6:02 PM IST

ಹಾವೇರಿ: ಪಿಎಫ್ಐ ಸಂಘಟನೆ ಅಂತಲ್ಲ ಯಾರು ದೇಶದ್ರೋಹಿ ಸಂಘಟನೆಗಳಲ್ಲಿ ಭಾಗಿಯಾಗ್ತಾರೆ, ಯಾರು ದೇಶದ ಗೌರವಕ್ಕೆ ಧಕ್ಕೆ ತರುತ್ತಾರೆ. ಅಲ್ಲದೇ ಯಾವುದೇ ಜಾತಿ, ಧರ್ಮ ಆಗಿರಲಿ, ಅವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಲೇಬೇಕಾಗುತ್ತದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ಕಾಂಗ್ರೆಸ್​ನವರಿಂದ ಪೇ ಸಿಎಂ ಅಭಿಯಾನ ಮಾಡಿದ ಬಗ್ಗೆ ಸಚಿವ ಹೆಬ್ಬಾರ್​ ಹಾವೇರಿಯಲ್ಲಿ ಮಾತನಾಡಿದರು. ಒಂದು ಕಡೆ ಜೋಡೋ ಯಾತ್ರೆ, ಮತ್ತೊಂದು ಕಡೆ ತೋಡೋ ಯಾತ್ರೆ ಶುರುವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಬಹಳ ಗಟ್ಟಿಯಾಗಿ ಎದುರಿಸುತ್ತೇವೆ. 2023ರಲ್ಲಿ ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ ಪುನಃ ಅಧಿಕಾರಕ್ಕೆ ಬರುತ್ತದೆ ಎಂದು ಹೆಬ್ಬಾರ್ ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಶಿವರಾಮ ಹೆಬ್ಬಾರ್ ಮತ್ತು ಬಿ ಸಿ ಪಾಟೀಲ್​

ಕಾಂಗ್ರೆಸ್​ನಿಂದ ಅಪಪ್ರಚಾರ: ಕೃಷಿ ಸಚಿವ ಬಿ ಸಿ ಪಾಟೀಲ್ ಮಾತನಾಡಿ, ಬೊಮ್ಮಾಯಿ ಅವರು ಸಿಎಂ ಆದಾಗಿನಿಂದ ಕಾಂಗ್ರೆಸ್​ನವರ ಅಪಪ್ರಚಾರ ಶುರುವಾಗಿದೆ. ಬೊಮ್ಮಾಯಿ ಅವರು ಹೋಗಿ ಬಿಡ್ತಾರೆ, ತೆಗೆದು ಬಿಡ್ತಾರೆ ಎಂದು ಕಾಂಗ್ರೆಸ್​ನವರು ಅಪಪ್ರಚಾರ ಮಾಡಿದರು. ಬೊಮ್ಮಾಯಿ ಅವರು ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ದಾರೆ. ಇದು ಕಾಂಗ್ರೆಸ್​ನವರಿಗೆ ಭಯ ಹುಟ್ಟಿಸಿದೆ ಎಂದು ಹೇಳಿದರು.

ಇದನ್ನೂ ಓದಿ:ಪಿಎಫ್​ಐ ಸಂಘಟನೆ ಜೊತೆ ಲಿಂಕ್​ ಹೊಂದಿರುವ ಆರೋಪ: ಇಬ್ಬರ ಬಂಧನ, ಓರ್ವ ವಶಕ್ಕೆ

ಪಿಎಫ್ಐ, ಎಸ್​ಡಿಪಿಐ ಸಂಘಟನೆ ಬ್ಯಾನ್ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಮುಂಜಾಗ್ರತಾ ಕ್ರಮವಾಗಿ ಅವರನ್ನು ಬಂಧಿಸಲಾಗುತ್ತಿದೆ. ಮುಂದೆ ಅದನ್ನು ಬ್ಯಾನ್ ಮಾಡಬೇಕೋ ಅಥವಾ ಬೇಡವೋ ಎಂಬುದನ್ನು ಸರ್ಕಾರ ತೀರ್ಮಾನ ಮಾಡುತ್ತದೆ. ಇಲ್ಲಿ ಲಾಭ ನಷ್ಟದ ಪ್ರಶ್ನೆಯಿಲ್ಲ. ದೇಶವನ್ನು ಉಳಿಸೋದು, ಶಾಂತಿ ಕಾಪಾಡೋದು ಬಹಳ ಮುಖ್ಯ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.

ABOUT THE AUTHOR

...view details