ಕರ್ನಾಟಕ

karnataka

ETV Bharat / state

ಪಟಾಕಿ ಗೋದಾಮಿನಲ್ಲಿ ಬೆಂಕಿ ಅವಘಡ ಸಂಬಂಧ ಎಲ್ಲ ಆಯಾಮದಲ್ಲೂ ತನಿಖೆ: ಸಚಿವ ಶಿವಾನಂದ ಪಾಟೀಲ್ - etv bharat kannada

ಹಾವೇರಿಯ ಆಲದಕಟ್ಟಿ ಗ್ರಾಮದ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಗಾಯಗೊಂಡವರಿಗೆ ಆಗುವ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

minister-shivananda-patil-reaction-on-cracker-warehouse-fire-incident-in-haveri
ಪಟಾಕಿ ಗೋದಾಮಿನಲ್ಲಿ ಬೆಂಕಿ ಅವಘಡ ಸಂಬಂಧ ಎಲ್ಲ ಆಯಾಮದಲ್ಲೂ ತನಿಖೆ: ಸಚಿವ ಶಿವಾನಂದ ಪಾಟೀಲ್

By ETV Bharat Karnataka Team

Published : Aug 30, 2023, 5:36 PM IST

ಸಚಿವ ಶಿವಾನಂದ ಪಾಟೀಲ್

ಹಾವೇರಿ: "ನಗರದ ಸಮೀಪದ ಆಲದಕಟ್ಟಿ ಗ್ರಾಮದಲ್ಲಿ ನಡೆದ ಪಟಾಕಿ ದುರಂತಕ್ಕೆ ಹಲವು ವೈಫಲ್ಯಗಳು ಕಾರಣ" ಎಂದು ಜವಳಿ ಮತ್ತು ಸಕ್ಕರೆ ಹಾಗೂ ಹಾವೇರಿ ಜಿಲ್ಲೆಯ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ಇಂದು ಆಲದಕಟ್ಟಿಯ ಪಟಾಕಿ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಘಟನೆ ಸಂಬಂಧ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತದೆ. ಈ ದುರಂತ ನಡೆದಿರುವುದು ದುರಾದೃಷ್ಟಕರ, ಆಗಬಾರದಾಗಿತ್ತು ಆಗಿದೆ. ಘಟನೆಯಲ್ಲಿ ಮೊದಲು ಮೂವರು, ಆಮೇಲೆ ಒಬ್ಬರು ಸೇರಿದಂತೆ ನಾಲ್ಕು ಜನ ಅಸುನೀಗಿದ್ದಾರೆ. ಇಬ್ಬರಿಗೆ ತೀವ್ರತರದ ಗಾಯಗಳಾಗಿದ್ದು, ಗಾಯಾಳುಗಳನ್ನು ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಗೆ ದಾಖಲಿಸುವುದಾಗಿ" ತಿಳಿಸಿದರು.

"ಗಾಯಾಳುಗಳಿಗೆ ಆಗುವ ಚಿಕಿತ್ಸೆಯ ಖರ್ಚನ್ನು ಸರ್ಕಾರವೇ ಭರಿಸುತ್ತದೆ. ಈ ರೀತಿಯ ಘಟನೆ ಮುಂದಿನ ದಿನಗಳಲ್ಲಿ ಆಗಬಾರದು. ಈ ಬಗ್ಗೆ ಎಲ್ಲ ರೀತಿಯ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲಿ ನಡೆದ ಘಟನೆ ಯಾವ ಜಿಲ್ಲೆಯಲ್ಲಿ ಸಹ ಆಗಬಾರದು, ಈ ಕುರಿತಂತೆ ಕೂಲಂಕಷ ವಿಚಾರ ಮಾಡಿ ರಾಜ್ಯದಲ್ಲಿ ಒಂದೇ ಮಾದರಿಯ ಕಾನೂನು ಜಾರಿಗೆ ತರಲಾಗುತ್ತದೆ. ಅಗ್ನಿಶಾಮಕದಳವರು ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ತೂಕದ ಪಟಾಕಿಗಳನ್ನು ಸಂಗ್ರಹಿಸಿಡಲಾಗಿತ್ತು. ಇದು ಮೇಲ್ನೋಟಕ್ಕೆ ಸಾಬೀತಾಗಿದೆ, ಇದರ ಜೊತೆಗೆ ಬೆಂಕಿ ತಗುಲಿದರೆ ಹೊರಗೆ ಹೋಗಲು ವ್ಯವಸ್ಥೆ ಇರಬೇಕಾಗಿತ್ತು. ಅದರಲ್ಲಿ ಲೋಪಗಳು ಇವೆ. ಇಷ್ಟು ಪ್ರಮಾಣದ ಬೆಂಕಿ ಹತ್ತಿದಾಗ ಅದನ್ನು ನಂದಿಸುವ ಮುಂಜಾಗರೂಕತೆಗಳ ಸಿದ್ಧತೆ ಸಹ ಸಮರ್ಪಕವಾಗಿರಲಿಲ್ಲಾ ಎಂಬ ಅಂಶ ಪತ್ತೆಯಾಗಿದೆ" ಎಂದು ಸಚಿವರು ಹೇಳಿದರು.

"ಪಟಾಕಿ ಗೋದಾಮಿಗೆ ಅನುಮತಿ ನೀಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅದು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಈ ಕುರಿತಂತೆ ತನಿಖೆ ನಡೆಸುತ್ತೇವೆ. ಈ ಕುರಿತಂತೆ 2020ರಲ್ಲಿ ಅನುಮತಿ ನೀಡಲಾಗಿದ್ದು, ಅದರ ನವೀಕರಣಕ್ಕೆ ಅರ್ಜಿ ಬಂದಿದೆ. ಎಲ್ಲ ಇಲಾಖೆಗಳು ತನಿಖೆಯಲ್ಲಿ ಭಾಗಿಯಾದಾಗ ಘಟನೆಯ ಕಾರಣಗಳನ್ನು ಪತ್ತೆಹಚ್ಚಲಾಗುತ್ತಿದೆ. ಈ ಘಟನೆಗೆ ಕಾರಣವಾದ ಅಂಶಗಳ ಮೇಲೆ ರಾಜ್ಯದಲ್ಲಿ ಈ ರೀತಿಯ ಘಟನೆಗಳಾಗದಂತೆ ಕಾನೂನು ರಚಿಸಲಾಗುತ್ತದೆ" ಎಂದು ತಿಳಿಸಿದರು.

"ಪಟಾಕಿ ದಾಸ್ತಾನು ಮಾಡಲು ಅನುಮತಿ ಇಲ್ಲ, ಸುರಕ್ಷತೆ ಪರಿಶೀಲನೆಯಾಗಿಲ್ಲಾ. ಈ ಕುರಿತಂತೆ ಎಲ್ಲ ರೀತಿಯ ತನಿಖೆ ಕೈಗೊಳ್ಳಲಾಗುತ್ತಿದೆ. ಈ ರೀತಿಯ ಗೋದಾಮುಗಳಿಗೆ ಅನುಮತಿ ನೀಡಬಾರದು. ಅನುಮತಿ ನೀಡಿದರೂ ಯಾವುದೇ ಮುಂಜಾಗ್ರತಾ ಕ್ರಮ ತಗೆದುಕೊಂಡಿಲ್ಲ ಎಂಬುದು ಇದರಿಂದ ಗೊತ್ತಾಗಿದೆ. ಯಾವ ಅಧಿಕಾರಿಗಳಿಗೆ ತನಿಖೆ ವಹಿಸಬೇಕು ಎಂಬುದನ್ನು ನೋಡಿಕೊಂಡು ತನಿಖೆಗೆ ನೀಡಲಾಗುತ್ತದೆ. ಈ ಘಟನೆಯಲ್ಲಿ ಯಾರನ್ನು ಬಂಧಿಸಿಲ್ಲ, ವಿಚಾರಣೆ ನಡೆಸಲಾಗುತ್ತಿದೆ" ಎಂದರು.

ಸಚಿವ ಶಿವಾನಂದ ಪಾಟೀಲ್ ಸ್ಥಳಕ್ಕಾಗಮಿಸುತ್ತಿದ್ದಂತೆ ಆಲದಕಟ್ಟಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಪಟಾಕಿ ಗೋದಾಮು ಬೇಡ ಎಂದು ಸಚಿವರಲ್ಲಿ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಚಿವರು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಜಿಲ್ಲಾಸ್ಪತ್ರೆ ಮತ್ತು ಶವಾಗಾರಕ್ಕೆ ಭೇಟಿ ನೀಡಿ ಮೃತರ ಮತ್ತು ಗಾಯಾಳುಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ:ಹಾವೇರಿ: ಪಟಾಕಿ ದಾಸ್ತಾನು ಗೋದಾಮಿಗೆ ಬೆಂಕಿ... ಸಾವಿನ ಸಂಖ್ಯೆ 4ಕ್ಕೆ ಏರಿಕೆ... ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ

ABOUT THE AUTHOR

...view details