ಕರ್ನಾಟಕ

karnataka

ETV Bharat / state

ಶಾಲೆ ಪುನಾರಂಭ: ಕೈಯಲ್ಲಿ ಮೈಕ್​ ಹಿಡಿದು ವಿದ್ಯಾರ್ಥಿಗಳಿಗೆ 'ಕೌರವ' COVID​ ಕ್ಲಾಸ್​​​ - ಕೌರವ

ಸರ್ಕಾರದ ಅದೇಶದ ಮೇರೆಗೆ ರಾಜ್ಯದಲ್ಲಿ 9 ರಿಂದ 12ನೇ ತರಗತಿಗಳು ಆರಂಭಗೊಂಡಿವೆ. ಈ ನಿಟ್ಟಿನಲ್ಲಿ ಇಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹಿರೇಕೆರೂರಿನ ಶಾಲಾ ಕಾಲೇಜ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

minister-bc-patil-visit-school-and-colleges-in-hirekerur
ಕೃಷಿ ಸಚಿವ ಬಿಸಿ ಪಾಟೀಲ್

By

Published : Aug 23, 2021, 6:51 PM IST

ಹಾವೇರಿ: ಜಿಲ್ಲೆಯಲ್ಲಿ ಅರೆಸರ್ಕಾರಿ ಮತ್ತು ಖಾಸಗಿ ಶಾಲೆಗಳು ಇಂದಿನಿಂದ ಪುನಾರಂವಾಗಿದ್ದು, ಕೃಷಿ ಸಚಿವ ಬಿ.ಸಿ. ಪಾಟೀಲ್ ಹಿರೇಕೆರೂರಿನ ಶಾಲಾ ಕಾಲೇಜ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಾಳಂಬೀಡ ಪ್ರೌಢಶಾಲೆ ಸೇರಿದಂತೆ ಹಿರೇಕೆರೂರು ಪಟ್ಟಣದ ಕಾಲೇಜ್‌ಗಳಿಗೆ ಸಚಿವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮೈಕ್​ ಹಿಡಿದು ವಿದ್ಯಾರ್ಥಿಗಳಿಗೆ ಕೌರವ ಕೊರೊನಾ ನಿಯಮಗಳ ಕುರಿತು ಕ್ಲಾಸ್ ತಗೆದುಕೊಂಡರು.

ಕೈಯಲ್ಲಿ ಮೈಕ್​ ಹಿಡಿದು ವಿದ್ಯಾರ್ಥಿಗಳಿಗೆ ಕೌರವ ಕೋವಿಡ್​ ಕ್ಲಾಸ್​​​

ಎರಡು ವರ್ಷಗಳಿಂದ ಶಾಲಾ ಕಾಲೇಜ್‌ಗಳು ಕೊರೊನಾದಿಂದ ಬಂದ್ ಆಗಿದ್ದವು. ಎರಡನೇ ಅಲೆ ಮುಕ್ತಾಯ ಹಂತದಲ್ಲಿರುವ ಕಾರಣ ಶಾಲಾ ತರಗತಿಗಳನ್ನು ಆರಂಭಿಸಲಾಗಿದೆ. ಕೊರೊನಾ ನಮ್ಮ ಮಧ್ಯದಲ್ಲಿರುವ ಕಾರಣ ಎಚ್ಚರಿಕೆಯಿಂದ ಇರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಲ್ಲದೆ, ಮೂರನೇ ಅಲೆ ಬರುವ ಸಾಧ್ಯತೆ ಇದೆ. ಅದಕ್ಕಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಪಾಲಿಸಬೇಕು. ಪದೇ ಪದೇ ಕೈಗಳನ್ನು ತೊಳೆದುಕೊಳ್ಳುತ್ತಿರಬೇಕು. ಕೋವಿಡ್​ ಕುರಿತು ಜಾಗೃತರಾಗಿರಿ ಎಂದು ಬಿ. ಸಿ. ಪಾಟೀಲ್ ಕಿವಿಮಾತು ಹೇಳಿದರು.

ABOUT THE AUTHOR

...view details