ಕರ್ನಾಟಕ

karnataka

ETV Bharat / state

ಲವ್ ಜಿಹಾದ್ ವಿರುದ್ಧ ಕಾಯ್ದೆ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ: ಬಿ.ಸಿ.ಪಾಟೀಲ್ - Agriculture Minister B.C. Patil

ಕಾಂಗ್ರೆಸ್ಸಿನವರು ಉಪಸಭಾಪತಿಯನ್ನು ಎಳೆದಾಡುವ ಮೂಲಕ ಆ ಸ್ಥಾನದ ಗೌರವ ಕಳೆದು, ಅದಕ್ಕೆ ಚ್ಯುತಿ ತಂದಿದ್ದಾರೆ. ಈ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ರಾಜ್ಯಪಾಲರಿಗೆ ದೂರು ನೀಡಲಾಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

minister bc patil talk about Enforcement of the Love Jihad Act
ಕೃಷಿ ಸಚಿವ ಬಿ.ಸಿ.ಪಾಟೀಲ್

By

Published : Dec 17, 2020, 3:57 PM IST

ಹಾವೇರಿ: ದೇಶದಲ್ಲಿ ಲವ್ ಜಿಹಾದ್ ಕಾಯ್ದೆ ಜಾರಿಗೆ ಬರಲೇಬೇಕು. ರಾಜ್ಯ ಸರ್ಕಾರವೂ ಕೂಡಾ ಈ ನಿಟ್ಟಿನಲ್ಲಿ ಕಾನೂನು ತರುವ ಚಿಂತನೆಯಲ್ಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್

ಹಾವೇರಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್‌ನಲ್ಲಿ ನಡೆದ ಘಟನೆ ಅಮಾನವೀಯ ಎಂದು ಬಣ್ಣಿಸಿದರು. ಪರಿಷತ್ ರದ್ದು ಮಾಡುವುದು ದೊಡ್ಡ ವಿಷಯವಲ್ಲ. ಅದು ಹಿರಿಯರ-ಚಿಂತಕರ ಮೇಲ್ಮನೆ. ಮೊನ್ನೆ ನಡೆದ ಘಟನೆ ಕಾಂಗ್ರೆಸ್​​ನ ಸಂಸ್ಕೃತಿ ಮತ್ತು ಗೂಂಡಾಗಿರಿಯನ್ನು ತೋರಿಸುತ್ತದೆ ಎಂದರು.

ಓದಿ: ವಿಧಾನ ಪರಿಷತ್​ನಲ್ಲಿ ನಡೆದ ಗಲಾಟೆಯಿಂದ ತುಂಬಾ ‌ನೋವಾಗಿದೆ: ಹೊರಟ್ಟಿ

ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಲ್ಲಿ ತಪ್ಪೇನಿದೆ? ಎಂದರು. ಅದು ಪ್ರಧಾನ ಮಂತ್ರಿಗಳ ದೊಡ್ಡತನ. ರಾಜಕೀಯ ವೈರಿಗಳಾದರೂ ನಾವು ಶುಭ ಸಂದರ್ಭ, ದುಃಖದ ಸಂದರ್ಭದಲ್ಲಿ ಭಾವನೆಗಳನ್ನು ಹಂಚಿಕೊಳ್ಳುತ್ತೇವೆ ಎಂದು ಹೇಳಿದರು.

ABOUT THE AUTHOR

...view details