ಹಾವೇರಿ:ಕೃಷಿ ಇಲಾಖೆಯಲ್ಲಿ ₹210 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ನನ್ನ ವಿರುದ್ಧ ಎಸಿಬಿಗೆ ದೂರು ನೀಡಿರುವ ವಿಚಾರ ಸತ್ಯಕ್ಕೆ ದೂರವಾದದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಜಿಲ್ಲೆಯ ಹಿರೇಕೆರೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ದುರುದ್ದೇಶದಿಂದ ಕೂಡಿದ ಆರೋಪವಾಗಿದೆ. ಯಾವುದೇ ತನಿಖೆಗೆ ಇಲಾಖೆ ಸಿದ್ಧವಿದೆ. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ದೂರು ನೀಡಿದವರು ಸಮರ್ಥನೆ ಮಾಡಬೇಕು. ಇಲ್ಲದಿದ್ದರೆ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದರು.
ಇದೆಲ್ಲ ಸುಳ್ಳು ಆರೋಪ:
ನಾನು ಸಚಿವನಾದ ಮೇಲೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದೇನೆ. ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ದುಡ್ಡು ಹೊಡೆಯುವವರ ಕೈ ಕಟ್ಟಾಗಿದೆ. ಹಾಗಾಗಿ ಕೆಲವರು ಈ ರೀತಿಯ ಸುಳ್ಳು ಆರೋಪ ಮಾಡಿರಬಹುದು. ಕೆಲಸ ಮಾಡುವವರ ಮೇಲೆ ಅಪಾದನೆ ಬರುತ್ತವೆ. ಮನೆಯಲ್ಲಿ ಕುಳಿತವರ ಮೇಲೆ ಅಲ್ಲ ಎಂದರು.
ಸಿಎಂಗೆ ಕೇಂದ್ರ ನಾಯಕರಿಂದ ಶ್ಲಾಘನೆ:
ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಸ್ವಾಗತಾರ್ಹ. ಬೊಮ್ಮಾಯಿ ಬುದ್ಧಿವಂತಿಕೆಯಿಂದ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರ ಕಾರ್ಯಕ್ರಮಗಳನ್ನು ಜನರು ಮತ್ತು ಕೇಂದ್ರ ನಾಯಕರು ಶ್ಲಾಘಿಸುತ್ತಿದ್ದಾರೆ ಎಂದರು.
ಸಿಎಂ ಬೊಮ್ಮಾಯಿಯಿಂದ ಉತ್ತಮ ಆಡಳಿತ:
ಪ್ರಧಾನಿ ನರೇಂದ್ರ ಮೋದಿ ತಲೆಯಲ್ಲಿ ಬಂದ ವಿಚಾರಗಳು ಅಮಿತ್ ಶಾ ಬಾಯಲ್ಲಿ ಬರುತ್ತವೆ. ಬಸವರಾಜ್ ಬೊಮ್ಮಾಯಿ ಸಿಎಂ ಆದ ಬಳಿಕ ಬೆಳಗಾವಿಯಲ್ಲಿ ಬಾರಿ ಅಂತರದಿಂದ ಗೆದ್ದಿದ್ದೇವೆ. ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಬಿಜೆಪಿ ತೆಕ್ಕೆಗೆ ಬರಲಿವೆ ಎಂಬ ವಿಶ್ವಾಸ ಇದೆ. ಬೊಮ್ಮಾಯಿ ಅನುಭವಿ ಅಡಳಿತಗಾರ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಸಿಎಂ ರಾಜ್ಯ ಮುನ್ನೆಡಸಿಕೊಂಡು ಹೋಗುತ್ತಿದ್ದಾರೆ ಎಂದರು.
ಓದಿ: ಬೆಂಗಳೂರು ನಗರದಲ್ಲಿ ಡೆಲ್ಟಾ ವೈರಸ್‌ನ ವಂಶವಾಹಿ ತಳಿ ಪತ್ತೆ..