ಹಾವೇರಿ: ಹೃದಯ ಸಂಬಂಧಿ ಕಾಯಿಲೆಗಳು ಮತ್ತು ತೀವ್ರ ಉಸಿರಾಟದ ಸಮಸ್ಯೆ ಇದ್ದರೆ ಮಾತ್ರ ಕೊರೊನಾದಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ಹಿರೇಕೆರೂರಿನಲ್ಲಿ 40 ಲಕ್ಷ ರೂ. ವೆಚ್ಚದ 2.5 ಲಕ್ಷ ಮಾಸ್ಕ್ಗಳನ್ನು ವಿತರಣೆ ಮಾಡಿದರು. ಕೊರೊನಾದಿಂದ ಯಾವ ಸಾವು ಸಂಭವಿಸೋದಿಲ್ಲ. ತೀವ್ರ ಉಸಿರಾಟದ ಸಮಸ್ಯೆಯಂತಹ ಕಾಯಿಲೆ, ಇತರೆ ಕಾಯಿಲೆ ಇದ್ರೆ ಮಾತ್ರ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಯಾವುದೇ ಕಾಯಿಲೆಗಳು ಇರದಿದ್ರೆ ಕೊರೊನಾ ಬಂದ್ರೆ ಯಾರೂ ಹೆದರುವ ಅಗತ್ಯವಿಲ್ಲ ಎಂದರು.