ಕರ್ನಾಟಕ

karnataka

ETV Bharat / state

ಲಾಕ್​​ಡೌನ್ ಮುಂದುವರೆಸುವ ಕುರಿತು ನಾಳೆ ನಿರ್ಧಾರವಾಗಲಿದೆ: ಬಸವರಾಜ ಬೊಮ್ಮಾಯಿ - ಬಸವರಾಜ್ ಬೊಮ್ಮಾಯಿ

ಕರ್ನಾಟಕದಲ್ಲಿ ಲಾಕ್​​ಡೌನ್​ ಮುಂದುವರಿಸುವ ಕುರಿತು ನಾಳೆ ಪ್ರಧಾನಿಯವರ ಜೊತೆಗಿನ ವಿಡಿಯೋ ಕಾನ್ಫರೆನ್ಸ್​ ಮುಗಿದ ಬಳಿಕ ನಿರ್ಧರಿಸಲಾಗುವುದು ಎಂದು ಗೃಹ ಸಚಿವ ಬಸವರಾಜ​ ಬೊಮ್ಮಾಯಿ ತಿಳಿಸಿದ್ದಾರೆ.

minister basavraj bommaiah reaction about lockdown extend
ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಹೇಳಿಕೆ

By

Published : Apr 10, 2020, 7:35 PM IST

ಹಾವೇರಿ:ರಾಜ್ಯದಲ್ಲಿ ಲಾಕ್​​ಡೌನ್ ಮುಂದುವರೆಸುವ ಕುರಿತಂತೆ ಶನಿವಾರ ನಿರ್ಧರಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿಯಲ್ಲಿ ಮಾತನಾಡಿದ ಅವರು, ಶನಿವಾರ ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಪರೆನ್ಸ್ ನಡೆಸಲಿದ್ದಾರೆ. ನಂತರವಷ್ಟೆ ರಾಜ್ಯದಲ್ಲಿ ಲಾಕ್​​​ಡೌನ್ ಮುಂದುವರೆಸಬೇಕೇ ಅಥವಾ ಬೇಡವೇ ಎಂಬುದು ನಿರ್ಧಾರವಾಗಲಿದೆ. ಈ ಕುರಿತಂತೆ ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್​ ಬಂದಿಲ್ಲ. ಆದರೂ ಸಹ ಕೊರೊನಾಗೆ ಬಿಡುಗಡೆಯಾದ ಹಣದಲ್ಲಿ ಹಾವೇರಿಯಲ್ಲಿ ಸಹ ಕೊರೊನಾ ಪರೀಕ್ಷೆಯ ಲ್ಯಾಬ್ ಆರಂಭಿಸುವ ಇಂಗಿತ ವ್ಯಕ್ತಪಡಿಸಿದರು. ಕೋವಿಡ್​-19 ತಡೆಗಟ್ಟುವುದು ಕೇವಲ ಸರ್ಕಾರದದ ಕಾರ್ಯವಲ್ಲ. ಜನರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸಮುದಾಯಗಳು ಒಟ್ಟಾಗಿ ಹೋರಾಡಿದಾಗ ಮಾತ್ರ ಇಂತಹ ಹೋರಾಟದಲ್ಲಿ ಜಯ ಗಳಿಸುವುದು ಸಾಧ್ಯ ಎಂದರು.

ABOUT THE AUTHOR

...view details