ರಾಣೆಬೆನ್ನೂರು: ಪೌರ ಕಾರ್ಮಿಕರು ನಿತ್ಯ ಸಾರ್ವಜನಿಕರಿಗೆ ಸಲ್ಲಿಸುತ್ತಿರುವ ಸೇವೆ ಅಮೂಲ್ಯವಾದದ್ದು ಎಂದು ಶಾಸಕ ಅರುಣ್ ಕುಮಾರ ಪೂಜಾರ ಹೇಳಿದರು.
ಕಾರ್ಮಿಕರ ಸೇವೆ ಅಮೂಲ್ಯ: ರಾಣೆಬೆನ್ನೂರು ಶಾಸಕ - May day celebration in ranebennur
ಕೊರೊನಾ ಸೋಂಕಿನ ಸಂಕಷ್ಟದ ಸಮಯದಲ್ಲಿಯೂ ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ಪೌರ ಕಾರ್ಮಿಕರ ಸೇವೆ ಅಮೂಲ್ಯವಾದುದು. ಈ ರೀತಿ ಸೇವೆ ಸಲ್ಲಿಸುತ್ತಿರುವ ಕೋಟ್ಯಂತರ ಕಾರ್ಮಿಕರ, ಶ್ರಮಿಕರ ದಿನವೇ ಮೇ ಮೊದಲ ದಿನ ಎಂದು ಶಾಸಕ ಅರುಣಕುಮಾರ ಹೇಳಿದರು.
ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ಅರುಣ ಕುಮಾರ
ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಕಾರ್ಮಿಕರ ದಿನದ ನಿಮಿತ್ತ ಪೌರ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು. ರಾಜ್ಯಾದ್ಯಂತ ಕೋವಿಡ್-19 ತಾಂಡವಾಡುತ್ತಿದೆ. ಇದರ ವಿರುದ್ಧ ಹೋರಾಟಕ್ಕೆ ಪೌರ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ, ಪ್ರಾಧಿಕಾರ ಅಧ್ಯಕ್ಷ ಚೋಳಪ್ಪ ಕಸವಾಳ, ಮೌನೇಶ ತಳವಾರ, ಚಂದ್ರು ಪೂಜಾರ ಇದ್ದರು.