ಹಾವೇರಿ:ಮಾಜಿ ಸಚಿವ ದಿವಂಗತ ಸಿ.ಎಸ್ ಶಿವಳ್ಳಿ ಅವರ ಸ್ಮರಣಾರ್ಥ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಯಿತು. ದಿ. ಶಿವಳ್ಳಿ ಅವರ ಸಹೋದರ ಷಣ್ಮುಖ ಶಿವಳ್ಳಿ ನೇತೃತ್ವದಲ್ಲಿ ಪಟ್ಟಣದ ತೋಪಿನ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 64 ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು.
ಮಾಜಿ ಸಚಿವ ದಿ. ಸಿ.ಎಸ್ ಶಿವಳ್ಳಿ ಸ್ಮರಣಾರ್ಥ ಮಾಸ್ ಮ್ಯಾರೇಜ್.. ದಾಂಪತ್ಯಕ್ಕೆ ಕಾಲಿಟ್ಟ 64 ಜೋಡಿಗಳು
ದಿ. ಸಿ.ಎಸ್ ಶಿವಳ್ಳಿ ಅವರ ಸಹೋದರ ಷಣ್ಮುಖ ಶಿವಳ್ಳಿ ನೇತೃತ್ವದಲ್ಲಿ ಪಟ್ಟಣದ ತೋಪಿನ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮದುವೆಯಾದ ಜೋಡಿಗಳಿಗೆ ತಾಳಿ, ಕಾಲುಂಗುರ, ವಧು-ವರರಿಗೆ ಬಟ್ಟೆ, ದೇವಸ್ಥಾನಕ್ಕೆ ತೆರಳುವ ಖರ್ಚಿಗೆ ಅಂತಾ ತಲಾ ಜೋಡಿಗೆ ಎರಡು ಸಾವಿರ ಹಣ, ಕೊಡೆ, ಬ್ಯಾಗ್ ಹಾಗೂ ಸೂಟ್ಕೇಸ್ ವಿತರಣೆ ಮಾಡಲಾಯಿತು. ಪಟ್ಟಣದ ವಿವಿಧ ಮಠಾಧೀಶರು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ನೂತನ ವಧು-ವರರಿಗೆ ಅಕ್ಷತೆ ಹಾಕಿ ಆಶೀರ್ವದಿಸಿದರು.
ದಿವಂಗತ ಸಿ.ಎಸ್. ಶಿವಳ್ಳಿ ಸಹೋದರ ಷಣ್ಮುಖ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಸಾಮೂಹಿಕ ವಿವಾಹ ನೆರವೇರಿಸಲಾಗುತ್ತಿದೆ. ಈಗಿನ ದುಬಾರಿ ಕಾಲದಲ್ಲಿ ಬಡವರು ಮದುವೆ ಮಾಡುವುದು ಕಷ್ಟದ ಕೆಲಸ. ಹೀಗಾಗಿ ಬಡವರಿಗಾಗಿ ಅಣ್ಣನಂತೆ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿಸುತ್ತಿರುವದಾಗಿ ಶಿವಳ್ಳಿ ಸಹೋದರ ಷಣ್ಮುಖ ಅವರು ತಿಳಿಸಿದರು.