ಕರ್ನಾಟಕ

karnataka

ETV Bharat / state

5 ಕೆಜಿ ಗೋಡಂಬಿ, 2 ಕೆಜಿ ಬಾದಾಮಿಯಿಂದ ಅಲಂಕಾರಗೊಂಡ ಮಾರುತಿ

ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಮಾರುತಿಯ ಅಲಂಕಾರವನ್ನು ಕಣ್ತುಂಬಿಕೊಂಡರು. ವಿಶೇಷ ಅಲಂಕಾರದಲ್ಲಿ ಸುಂದರವಾಗಿ ಕಾಣುತ್ತಿದ್ದ ಮಾರುತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು..

Maruti idol decorated with dry fruits at Haveri
ಡ್ರೈಫ್ರೂಟ್ಸ್​​ನಿಂದ ಅಲಂಕಾರಗೊಂಡಿತು ಮಾರುತಿಯ ಮೂರ್ತಿ

By

Published : Dec 12, 2021, 3:12 PM IST

Updated : Dec 12, 2021, 3:59 PM IST

ಹಾವೇರಿ: ಹಾವೇರಿಯ ರೈಲು ನಿಲ್ದಾಣದ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿಂದು ಕಾರ್ತಿಕೋತ್ಸವ ಹಿನ್ನೆಲೆ ವಿಶೇಷ ಪೂಜೆ ನೆರವೇರಿಸಲಾಯಿತು.

ಡ್ರೈಫ್ರೂಟ್ಸ್​​ನಿಂದ ಅಲಂಕಾರಗೊಂಡಿತು ಮಾರುತಿಯ ಮೂರ್ತಿ

ಕಾರ್ತಿಕೋತ್ಸವದ ಅಂಗವಾಗಿ ದೇವಸ್ಥಾನದ ಅರ್ಚಕ ಲಕ್ಷ್ಮಣ ಆಂಜನೇಯನ ಮೂರ್ತಿಗೆ ವಿಶೇಷ ಅಲಂಕಾರ ಮಾಡಿದ್ದರು. ಮಾರುತಿಯ ಮೂರ್ತಿಗೆ 5 ಕೆಜಿ ಗೋಡಂಬಿ ಮತ್ತು 2 ಕೆಜಿ ಬಾದಾಮಿಯಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.

ದೇವರನ್ನು ಡ್ರೈಫ್ರೂಟ್ಸ್​​ನಿಂದ ಅಲಂಕಾರ ಮಾಡಿದರೆ ಸುಂದರವಾಗಿ ಕಾಣುತ್ತದೆ. ಹಾಗಾಗಿ, ಈ ರೀತಿ ತಮ್ಮ ಭಕ್ತಿ ಅರ್ಪಿಸಿರುವುದಾಗಿ ಅರ್ಚಕ ಲಕ್ಷ್ಮಣ ತಿಳಿಸಿದರು.

ಇದನ್ನೂ ಓದಿ:ಏಕ ಶಿಲಾ ನಗರಿ 'ಮಧುಗಿರಿ' ಮಡಿಲಲ್ಲಿ ಪತ್ತೆಯಾಯ್ತು ಜಲಾಧಾರೆಯ ವೈಭವ...

ಕಾರ್ತಿಕೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ತಳಿರು, ತೋರಣಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಮಾರುತಿಯ ಅಲಂಕಾರವನ್ನು ಕಣ್ತುಂಬಿಕೊಂಡರು. ವಿಶೇಷ ಅಲಂಕಾರದಲ್ಲಿ ಸುಂದರವಾಗಿ ಕಾಣುತ್ತಿದ್ದ ಮಾರುತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

Last Updated : Dec 12, 2021, 3:59 PM IST

ABOUT THE AUTHOR

...view details