ಕರ್ನಾಟಕ

karnataka

ETV Bharat / state

ಮದುವೆ ಮುಂದೂಡಲಾಗಿದೆ.. ದಿನಾಂಕವನ್ನ ಜಾಲತಾಣದಲ್ಲಿ ತಿಳಿಸಲಾಗುವುದು.. ಹೀಗೊಂದು ಆಮಂತ್ರಣ ಪತ್ರ - ಹಾವೇರಿ

ಕೊರೊನಾದಿಂದ ತಮ್ಮ ಮಗನ ಮದುವೆ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನ ಸಾಮಾಜಿಕ ಜಾಲತಾಣದಲ್ಲಿ ತಿಳಿಸುವ ಒಕ್ಕಣೆ ಇರುವ ಲಗ್ನ ಪತ್ರಿಕಗಳನ್ನ ಹಾವೇರಿ ಜಿಲ್ಲೆ ಬ್ಯಾಡಗಿಯ ವರ್ತಕ ಪಿ.ಆರ್ ದೊಡ್ಮನಿ ವಿತರಿಸುತ್ತಿದ್ದಾರೆ.

marriage
marriage

By

Published : Apr 2, 2020, 11:33 AM IST

ಹಾವೇರಿ: ವಿವಾಹ ಪತ್ರಿಕೆಯಲ್ಲಿ ಮೊದಲೆಲ್ಲಾ ಲಗ್ನಪತ್ರಿಕೆ ನೀಡಬೇಕಾದವರ ಹೆಸರು ಇರುತ್ತಿತ್ತು. ತದನಂತರ ನಿಮ್ಮ ಹೆಸರು ನಮ್ಮ ನಮ್ಮ ಮನದಲ್ಲಿದೆ ಮದುವೆಗೆ ಬನ್ನಿ ಎಂದು ಪ್ರಿಂಟ್ ಮಾಡಲಾಗುತ್ತಿತ್ತು.

ಆದರೆ ಕರೊನಾ ಬಂದ ಮೇಲೆ ನಿಗದಿಯಾದ ಮದುವೆಗಳನ್ನು ಸಹ ಮುಂದೂಡಲಾಗುತ್ತಿದೆ. ಈ ರೀತಿ ಮದುವೆಗಳು ಮುಂದೂಡಲ್ಪಟ್ಟ ವಿವಾಹ ಪತ್ರಿಕೆಗಳನ್ನು ಸಂಬಂಧಿಕರಿಗೆ ವಿತರಿಸಲಾಗುತ್ತಿದೆ‌‌.

ಕರೊನಾದಿಂದಾಗಿ ಮದುವೆ ಮಂದೂಡಿಕೆ

ಆದರೆ ಹಾವೇರಿ ಜಿಲ್ಲೆ ಬ್ಯಾಡಗಿಯ ವರ್ತಕ ಪಿ.ಆರ್ ದೊಡ್ಮನಿ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತಮ್ಮ ಮಗನ ಮದುವೆ ಕಾರ್ಡ್​ನಲ್ಲಿ ಕೊರೊನಾದಿಂದ ತಮ್ಮ ಮಗನ ಮದುವೆ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನ ಸಾಮಾಜಿಕ ಜಾಲತಾಣದಲ್ಲಿ ತಿಳಿಸುವ ಒಕ್ಕಣೆ ಇರುವ ಲಗ್ನ ಪತ್ರಿಕಗಳನ್ನ ವಿತರಿಸುತ್ತಿದ್ದಾರೆ. ಅಲ್ಲದೆ ಎಲ್ಲರೂ ಪ್ರಧಾನಿ ಕರೆ ನೀಡಿರುವ ಲಾಕ್ ಡೌನ್ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details