ಹಾವೇರಿ: ಮನೆಯ ಗೋಡೆ, ಮೇಲ್ಛಾವಣಿ ಹಾಗೂ ಆಲದ ಮರ ಮೈಮೇಲೆ ಬಿದ್ದು ಓರ್ವ ಸಾವನ್ನಪ್ಪಿರುವ ಘಟನೆ ಹಾವೇರಿ ನಗರದ ಮಕಾನ್ ಗಲ್ಲಿಯಲ್ಲಿ ನಡೆದಿದೆ.
ಹಾವೇರಿಯಲ್ಲಿ ಮನೆ ಗೋಡೆ, ಮರ ಬಿದ್ದು ವ್ಯಕ್ತಿ ಸಾವು - ಮರ ಬಿದ್ದು ಹಾವೇರಿಯಲ್ಲಿ ವ್ಯಕ್ತಿ ಸಾವು
ಮನೆಯ ಗೋಡೆ, ಮೇಲ್ಛಾವಣಿ ಮತ್ತು ಆಲದ ಮರ ಮೈಮೇಲೆ ಬಿದ್ದು ಓರ್ವ ಸಾವನ್ನಪ್ಪಿರುವ ಘಟನೆ ಹಾವೇರಿ ನಗರದ ಮಕಾನ್ ಗಲ್ಲಿಯಲ್ಲಿ ನಡೆದಿದೆ.
ಮರ ಬಿದ್ದು ವ್ಯಕ್ತಿ ಸಾವು
ಫಕ್ಕೀರಪ್ಪ ಹರಿಜನ (40) ಮೃತ ವ್ಯಕ್ತಿ ಎನ್ನಲಾಗಿದೆ. ಫಕ್ಕೀರಪ್ಪ ಹಾವೇರಿ ತಾಲೂಕಿನ ನಾಗನೂರು ಗ್ರಾಮದ ನಿವಾಸಿ. ಹೊಸ ಮನೆ ನಿರ್ಮಿಸಲು ಹಳೆ ಮನೆ ಕೆಡುವುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಮನೆ ಕೆಡವೋ ಕೆಲಸಕ್ಕೆ ಬಂದಿದ್ದ ಫಕ್ಕೀರಪ್ಪ, ಕೆಲಸದಲ್ಲಿ ನಿರತವಾಗಿದ್ದ ವೇಳೆ ಮನೆಯ ಗೋಡೆ ಮೇಲೆ ಬೆಳೆದಿದ್ದ ಆಲದ ಮರ ಮತ್ತು ಮನೆಯ ಗೋಡೆ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಮಣ್ಣಿನಡಿ ಸಿಲುಕಿದ್ದ ಮೃತದೇಹ ಹೊರತೆಗೆದಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.