ಕರ್ನಾಟಕ

karnataka

ETV Bharat / state

ಹಾನಗಲ್​​​: 6 ಬಾರಿ ಹಾವು ಕಚ್ಚಿ ಉರಗ ತಜ್ಞ ಸಾವು! - ಉರಗ ತಜ್ಞನಿಗೆ ಕಚ್ಚಿದ ಹಾವು ನ್ಯೂಸ್​

ಸತತ 6 ಬಾರಿ ಹಾವು ಕಚ್ಚಿದ ಪರಿಣಾಮ ಉರಗ ತಜ್ಞನೊಬ್ಬ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್​​​ ಪಟ್ಟಣದಲ್ಲಿ ನಡೆದಿದೆ. ಇರ್ಫಾನ್ ಸಂಗೂರ (23) ಹಾವು ಕಚ್ಚಿ ಮೃತಪಟ್ಟ ಉರಗ ತಜ್ಞ.

man died due to snake bite
ಹಾವು ಕಚ್ಚಿ ಉರಗ ತಜ್ಞ ಸಾವು

By

Published : Jun 27, 2020, 12:09 PM IST

ಹಾನಗಲ್/ಹಾವೇರಿ:ಹಾವು ಹಿಡಿಯಲು ಹೋಗಿದ್ದ ಉರಗ ತಜ್ಞನಿಗೆ 6 ಬಾರಿ ಹಾವು ಕಚ್ಚಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಹಾನಗಲ್ ಪಟ್ಟಣದಲ್ಲಿ ನಿನ್ನೆ ಸಂಜೆ ನಡೆದಿದೆ.

ಹಾವು ಕಚ್ಚಿ ಉರಗ ತಜ್ಞ ಸಾವು

ಪಟ್ಟಣದ ಕಲ್ಲಹಕ್ಕಲ ಓಣಿಯ ನಿವಾಸಿ ಇರ್ಫಾನ್ ಸಂಗೂರ (23) ಸಾವನ್ನಪ್ಪಿದ ಉರಗ ತಜ್ಞನಾಗಿದ್ದು, ಹಲವು ವರ್ಷಗಳಿಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದ. ಹಾವು ಬಂದಿದೆ ಎಂದು ಫೋನ್​​ ಬಂದರೆ ಸಾಕು ತಕ್ಷಣ ಹಾಜರಾಗಿ ಜೀವದ ಹಂಗು ತೊರೆದು ಹಾವು ಹಿಡಿದು ಕಾಡಿಗೆ ಬಿಡುತ್ತಿದ್ದನಂತೆ.

ಆದರೆ ನಿನ್ನೆ ದೊಡ್ಡ ಹಾವನ್ನು ಹಿಡಿಯುವ ಸಂದರ್ಭದಲ್ಲಿ ಹಾವು ಆರು ಬಾರಿ ಕಚ್ಚಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ ಎಂದು ತಿಳಿದು ಬಂದಿದೆ.

ABOUT THE AUTHOR

...view details