ರಾಣೆಬೆನ್ನೂರು: ವಿದ್ಯಾರ್ಥಿ ಮೇಲೆ ಮಚ್ಚು ಹಿಡಿದು ಹಲ್ಲೆ ಮಾಡಲು ಯತ್ನಿಸಿದ್ದ ವ್ಯಕ್ತಿಯನ್ನು ರಾಣೆಬೆನ್ನೂರು ಶಹರ ಠಾಣೆ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಚ್ಚು ಹಿಡಿದು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಲು ಮುಂದಾದ ವ್ಯಕ್ತಿ ಅಂದರ್ - ಲೆಟೆಸ್ಟ್ ರಾಣೆಬೆನ್ನೂರ್ ಹಾವೇರಿ ನ್ಯೂಸ್
ವಿದ್ಯಾರ್ಥಿ ಮೇಲೆ ಮಚ್ಚು ಹಿಡಿದು ಹಲ್ಲೆ ಮಾಡಲು ಯತ್ನಿಸಿದ್ದ ವ್ಯಕ್ತಿಯನ್ನು ರಾಣೆಬೆನ್ನೂರು ಶಹರ ಠಾಣೆ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಚ್ಚು ಹಿಡಿದು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಲು ಮುಂದಾದ ವ್ಯಕ್ತಿ ಅಂದರ್
ತಾಲೂಕಿನ ಮಾಗೋಡ ಗ್ರಾಮದ ಹನುಮಂತ ಹರಿಹರ ಬಂಧಿತ ಆರೋಪಿ. ನ.7 ರಂದು ಆಟೋವನ್ನು ಅತಿವೇಗವಾಗಿ ಚಲಾಯಿಸಬೇಡ, ನಿಧಾನ ಹೋಗು ಎಂದಿದ್ದಕ್ಕೆ ಆಟೋ ಚಾಲಕ ಹನುಮಂತ ಹರಿಹರ, ವಿದ್ಯಾರ್ಥಿಯ ಮೇಲೆ ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಲು ಮುಂದಾಗಿದ್ದ. ಈ ಘಟನೆಯ ವಿಡಿಯೋ ಭಾರಿ ಸಂಚಲನ ಮೂಡಿಸಿದ್ದು, ಸಖತ್ ಟ್ರೋಲ್ ಕೂಡಾ ಆಗಿತ್ತು. ಇಂದು ವಿದ್ಯಾರ್ಥಿ ಕೊಟ್ಟ ದೂರಿನ ಮೇರೆಗೆ ಪೋಲಿಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.