ಕರ್ನಾಟಕ

karnataka

ETV Bharat / state

ರಾಣೆಬೆನ್ನೂರು ಉಪ ನೋಂದಣಿ ಕಚೇರಿಯಲ್ಲಿ ಶಿಸ್ತುಬದ್ಧ ನಿಯಮ ಪಾಲನೆ - ಉಪ ನೋಂದಣಿ ಕಚೇರಿ ಸೇವೆ ಪಡೆಯಲು ಆನ್‌ಲೈನ್ ಅರ್ಜಿ

ಉಪ ನೋಂದಣಿ ಕಚೇರಿಯ ಎಲ್ಲಾ ಸೇವೆ ಪಡೆದುಕೊಳ್ಳಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಕಚೇರಿಗೆ ಬಂದಾಗ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು ಮತ್ತು ಸ್ಕ್ರೀನಿಂಗ್ ಟೆಸ್ಟ್​​ ಮಾಡಿಸಿಕೊಳ್ಳಬೇಕು.

Ranebennur
ಉಪ ನೋಂದಣಿ ಕಚೇರಿ

By

Published : May 18, 2020, 2:23 PM IST

ರಾಣೆಬೆನ್ನೂರು: ನಗರದ ಉಪ ನೋಂದಣಿ ಕಚೇರಿಯಲ್ಲಿ ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ನೋಂದಣಿ ಕಾರ್ಯಾಲಯ ಶಿಸ್ತು ಬದ್ಧ ನಿಯಮಾವಳಿ ರೂಪಿಸಿದೆ.

ನಗರದ ಉಪ ನೋಂದಣಿ ಕಚೇರಿಗೆ ಬರುವರು ಇಸಿ, ಸಿಎ ಬೇಕೆಂದು ನೇರವಾಗಿ ಸಿಬ್ಬಂದಿ ಕೈ ಕುಲುಕುವಂತಿಲ್ಲ. ಕಚೇರಿಯ ಎಲ್ಲಾ ಸೇವೆ ಪಡೆದುಕೊಳ್ಳಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ನಂತರ ಕೆಲಸದ ದಿನ, ಸಮಯ ನಿಗದಿ ಮಾಡಿಕೊಂಡು ಎಂಟ್ರಿ ಪಾಸ್ ತೆಗೆದುಕೊಂಡು ಕಚೇರಿಗೆ ಹೋಗಬೇಕು.

ರಾಣೆಬೆನ್ನೂರು ಉಪ ನೋಂದಣಿ ಕಚೇರಿ

ಇನ್ನು ಕಚೇರಿಗೆ ಬಂದಾಗ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಕ್ರೀನಿಂಗ್ ಮಷಿನ್ ಮೂಲಕ ತಪಾಸಣೆ ಮಾಡಿಸಿಕೊಳ್ಳಬೇಕು. ಮಾಸ್ಕ್ ಧರಿಸದೆ ಬಂದರೆ ಒಳಗಡೆ ಪ್ರವೇಶವಿಲ್ಲ ಎಂದು ಸ್ಪಷ್ಟವಾಗಿ ಸೂಚನಾ ಫಲಕ ಕೂಡ ಅಳವಡಿಸಿದ್ದಾರೆ.

ಕೊರೊನಾ ಸೋಂಕು ಹರಡುವ ಭೀತಿಯಿಂದ ಕಚೇರಿಯ ಕೆಲಸವನ್ನು ಒಂದೂವರೆ ತಿಂಗಳಿಂದ ಸ್ಥಗಿತಗೊಳಿಸಿದ್ದ ಕಚೇರಿಯಲ್ಲಿ ಕಳೆದ ಒಂದು ವಾರದಿಂದ ಮತ್ತೆ ನೋಂದಣಿ ಕೆಲಸಗಳು ಶುರುವಾಗಿವೆ.

ABOUT THE AUTHOR

...view details