ಹಾವೇರಿ:ಬಹುಶಃ ಹಿರಿಯಶ್ರೀಗಳು ನಮ್ಮನ್ನ ಆಯ್ಕೆ ಮಾಡದಿದ್ದರೇ ನಾನು ಸಹ ಯಾರದಾದರೂ ಮನೆಯಲ್ಲಿ ಸಂಬಳ ಇರಬೇಕಾಗಿತ್ತು. ಇಂದು ಶಿಕ್ಷಣ ದುಬಾರಿಯಾಗುತ್ತಿರುವದೇ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಎಲ್ಲರಿಗೂ ಉಚಿತ ಶಿಕ್ಷಣ ನೀಡಿದ್ದೇ ಆದರೆ ಭ್ರಷ್ಟಾಚಾರ ಸಹ ಇರುವದಿಲ್ಲ ಎಂದು ಸಾಣಿಹಳ್ಳಿಮಠದ ಪಂಡಿತ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೊಪ್ಪಳದ ಗವಿಸಿದ್ದೇಶ್ವರಮಠದ ಗವಿಸಿದ್ದೇಶ್ವರ ಶ್ರೀಗಳು ಗುರುವಾರ ಸಾರ್ವಜನಿಕ ಸಭೆಯಲ್ಲಿ ಕಣ್ಣೀರು ಹಾಕಿದ್ದನ್ನು ಉಲ್ಲೇಖಿಸಿ ಅವರು ಮಾತನಾಡುತ್ತಿದ್ದರು. ಗವಿಸಿದ್ದೇಶ್ವರ ಶ್ರೀಗಳು ಸ್ವಾರ್ಥಕ್ಕಾಗಿ ಕಣ್ಣೀರು ಹಾಕಲಿಲ್ಲಾ ಬದಲಿಗೆ ತಮ್ಮ ಗುರುಗಳು ತನಗೆ ಆಶ್ರಯ ನೀಡಿ ಶಿಕ್ಷಣ ನೀಡಿದ್ದರಿಂದ ನಾನು ಈ ಸ್ಥಾನಕ್ಕೆ ಬಂದಿದ್ದೇನೆ ಎಂಬುದನ್ನು ನೆನೆದು ಗವಿಸಿದ್ದೇಶ್ವರ ಶ್ರೀಗಳು ಕಣ್ಣೀರು ಹಾಕಿದ್ದಾರೆ ಎಂದು ಶ್ರೀಗಳು ತಿಳಿಸಿದರು.