ಕರ್ನಾಟಕ

karnataka

ETV Bharat / state

ಹಾನಗಲ್​ನಲ್ಲಿ 20ಕ್ಕೂ ಅಧಿಕ ಜನರಿಗೆ ಹುಚ್ಚು ನಾಯಿ ಕಡಿತ - ಹಾವೇರಿ ​ ಹುಚ್ಚು ನಾಯಿ ದಾಳಿ

ಹುಚ್ಚು ನಾಯಿಯೊಂದು 20ಕ್ಕೂ ಅಧಿಕ ಜನರಿಗೆ ಕಡಿದಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದೆ.

mad-dog-bites-people-in-hanagal
ಹಾನಗಲ್​ನಲ್ಲಿ 20ಕ್ಕೂ ಅಧಿಕ ಜನರಿಗೆ ಹುಚ್ಚು ನಾಯಿ ಕಡಿತ

By

Published : Mar 12, 2022, 10:58 PM IST

Updated : Mar 13, 2022, 9:34 AM IST

ಹಾವೇರಿ:ಹುಚ್ಚು ನಾಯಿಯೊಂದು 20ಕ್ಕೂ ಅಧಿಕ ಜನರಿಗೆ ಕಚ್ಚಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದ ಕಮಾಟಗೇರಿ ಮತ್ತು ಕಲ್ಲುಹಕ್ಕಲಿನಲ್ಲಿ ನಡೆದಿದೆ. ಮನೆಯ ಹೊರಗೆ ಆಟವಾಡುತ್ತಿದ್ದ ಮಕ್ಕಳು ಮತ್ತು ಮನೆಯಲ್ಲಿದ್ದವರ ಮೇಲೂ ದಾಳಿ ಮಾಡಿರುವ ನಾಯಿ ಸಿಕ್ಕ ಸಿಕ್ಕ ಕಡೆ ಕಡಿದು ಗಾಯಗೊಳಿಸಿದೆ.

ಆಕಳು ಮತ್ತು ಎಮ್ಮೆಗಳಿಗೂ ಕೂಡ ನಾಯಿ ಕಚ್ಚಿದ್ದು, ಅಜ್ಜಿಯೊಬ್ಬರ ಬೆರಳನ್ನು ಕಡಿದು ಹಾಕಿದೆ. ಗಾಯಾಳುಗಳಿಗೆ ಹಾನಗಲ್ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಗಾಯಗೊಂಡವರು

ಬಳಿಕ ಹುಚ್ಚು ನಾಯಿ ನಾಪತ್ತೆಯಾಗಿದ್ದು, ಹಾನಗಲ್ ಪುರಸಭೆಯು ಪತ್ತೆಗೆ ಹುಡುಕಾಟ ಆರಂಭಿಸಿದೆ. ಹುಚ್ಚು ನಾಯಿಯು ಸಂಶಿ ಕಡೆಯಿಂದ ಪಟ್ಟಣಕ್ಕೆ ಬಂದಿದೆ ಎನ್ನಲಾಗ್ತಿದೆ.

ನಾಯಿ ದಾಳಿಯಿಂದ ಹಾನಗಲ್ ಪಟ್ಟಣದ ಜನ ಆತಂಕಗೊಂಡಿದ್ದು, ಆದಷ್ಟು ಬೇಗ ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಮೈಸೂರು: ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ.. ಮನೆಯಲ್ಲಿದ್ದವ ಸಜೀವ ದಹನ

Last Updated : Mar 13, 2022, 9:34 AM IST

ABOUT THE AUTHOR

...view details