ರಾಣೆಬೆನ್ನೂರು: ಹಾವೇರಿ ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಗೊಂಡ ಹಿನ್ನೆಲೆ ರಾಣೆಬೆನ್ನೂರು ನಗರದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿವೆ.
ಲಾಕ್ಡೌನ್ ಸಡಿಲಿಕೆ: ಸಹಜ ಸ್ಥಿತಿಗೆ ಮರಳಿದ ರಾಣೆಬೆನ್ನೂರು - Haveri latest news
ಹಾವೇರಿ ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಗೊಳಿಸಲಾಗಿದೆ. ಈ ಹಿನ್ನೆಲೆ ರಾಣೆಬೆನ್ನೂರಿನಲ್ಲಿ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳು ಮತ್ತು ಕಚೇರಿಗಳನ್ನು ತೆರೆಯಲಾಗಿದೆ.

ನಗರಸಭೆ, ತಹಶೀಲ್ದಾರ್ ಕಚೇರಿ, ಬ್ಯಾಂಕ್ ಸೇರಿದಂತೆ ವಿವಿಧ ಕಚೇರಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸಲು ಜಿಲ್ಲಾಡಳಿತ ಮಾರ್ಗಸೂಚಿ ಹೊರಡಿಸಿದೆ. ಈ ಹಿನ್ನೆಲೆ ಬಹುತೇಕ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಮತ್ತು ಕಚೇರಿಗಳನ್ನು ತೆರೆಯಲಾಗಿದೆ.
ನಗರದಲ್ಲಿ ವಾಹನ ಸಂಚಾರ ಕೂಡ ಸಹಜ ಸ್ಥಿತಿಗೆ ಮರಳುತ್ತಿದ್ದು, ಕಳೆದ 40 ದಿನ ಮೌನವಾಗಿದ್ದ ರಾಣೆಬೆನ್ನೂರು ನಗರದಲ್ಲಿ ಈಗ ಮತ್ತೆ ಜನಸಂದಣಿ ಆಗುತ್ತಿದೆ. ಇದಲ್ಲದೆ ನಗರದಲ್ಲಿರುವ ಬಟ್ಟೆ ಅಂಗಡಿಗಳಲ್ಲಿ ಜನಸಂದಣಿ ಹೆಚ್ಚಾಗಿದ್ದು, ಮಾಲೀಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ಪಾನ ಪ್ರಿಯರು ಸಹ ಮದ್ಯದಂಗಡಿ ಮುಂದೆ ಸರತಿಯಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ.