ಹಾವೇರಿ: ಜಿಲ್ಲೆಯು ಹಸಿರು ವಲಯವೆಂದು ಗುರುತಿಸಲ್ಪಟ್ಟಿರುವ ಹಿನ್ನೆಲೆ ಇಂದಿನಿಂದ ಇಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ.
ಹಸಿರು ವಲಯ ಹಾವೇರಿಯಲ್ಲಿ ಲಾಕ್ಡೌನ್ ಸಡಿಲ: ಸಹಜ ಸ್ಥಿತಿಯತ್ತ ಜನಜೀವನ - Corona Effect
ಹಾವೇರಿಯಲ್ಲಿ ಲಾಕ್ಡೌನ್ ಸಡಿಲಿಕೆಯಾಗಿದ್ದು ಸಂಚಾರ, ಜನಜೀವನ ಎಂದಿನಂತೆ ಸಹಜ ಸ್ಥಿತಿಗೆ ಮರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಹಸಿರು ವಲಯ ಹಾವೇರಿಯಲ್ಲಿ ಲಾಕ್ಡೌನ್ ಸಡಿಲ: ಸಹಜ ಸ್ಥಿತಿಯತ್ತ ಜನಜೀವನ
ಈ ಹಿನ್ನೆಲೆ ಸಂಚಾರಕ್ಕಾಗಿ ಬಸ್ ಗಳು ಡಿಪೋದಿಂದ ಹೊರಟಿದ್ದು, ಎಚ್ಚರಿಕೆ ಕ್ರಮಗಳನ್ನನುಸರಿಸುವ ಮೂಲಕ ಸಂಚಾರ ಕೈಗೊಳ್ಳಲಾಗುತ್ತದೆ. ದಿನಸಿ, ಆಟೊಮೊಬೈಲ್ಸ್, ಎಲೆಕ್ಟ್ರಿಕಲ್ ಮದ್ಯದಂಗಡಿ ಸೇರಿದಂತೆ ಬಹುತೇಕ ಅಂಗಡಿಗಳು ಬಾಗಿಲು ತೆರೆಯಲಿವೆ. ಜಿಲ್ಲೆಯಲ್ಲಿನ ಒಟ್ಟು 104 ಮದ್ಯದಂಗಡಿಗಳು ಇಂದಿನಿಂದ ಆರಂಭಗೊಳ್ಳಲಿವೆ. ಲಾಕ್ ಡೌನ್ ಸಡಿಲಿಕೆಯಿಂದ ಜನಜೀವನ ಎಂದಿನಂತೆ ಮುನ್ನಡೆಯಲಿದೆ.