ರಾಣೇಬೆನ್ನೂರು:ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ವೃದ್ಧೆಯನ್ನು ಸ್ಥಳೀಯರು ಹಾಗೂ ಕುಮಾರಪಟ್ಟಣಂ ಪೊಲೀಸರು ರಕ್ಷಣೆ ಮಾಡಿದ ಘಟನೆ ತಾಲೂಕಿನ ನಲವಾಗಲ ಗ್ರಾಮದ ಬಳಿ ನಡೆದಿದೆ.
ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ ರಕ್ಷಿಸಿದ ಸ್ಥಳೀಯರು, ಪೊಲೀಸರು - ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ರಕ್ಷಣೆ
ಜೀವನದಲ್ಲಿ ಜಿಗುಪ್ಸೆಗೊಂಡು ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವೃದ್ಧೆಯನ್ನು ಸ್ಥಳೀಯರು ಮತ್ತು ಪೊಲೀಸರು ಸೇರಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ ರಕ್ಷಣೆ
ದಾವಣಗೆರೆ ಮೂಲದ ಶಾಂತಮ್ಮ ಶಿವಪ್ಪ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ವೃದ್ಧೆ. ಜೀವನದಲ್ಲಿ ಜಿಗುಪ್ಸೆಗೊಂಡ ಶಾಂತಮ್ಮ ನಲವಾಗಲ ಗ್ರಾಮದ ಬಳಿಯ ರೈಲ್ವೆ ಸೇತುವೆಯಿಂದ ತುಂಗಭದ್ರಾ ನದಿಗೆ ಹಾರಿದ್ದಾರೆ. ವೃದ್ಧೆ ನದಿಗೆ ಹಾರಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣ ಎಚ್ಚೆತ್ತುಕೊಂಡು ರಕ್ಷಿಸಿದ್ದಾರೆ.
ಸ್ಥಳಕ್ಕೆ ಬಂದ ಕುಮಾರಪಟ್ಟಣಂ ಠಾಣೆ ಮಹಿಳಾ ಪಿಎಸ್ಐ ಎಂ.ಎ.ಅಸಾದಿ, ಕಿರಣ ಬೆಳಗಾವಿ, ಮಂಜಪ್ಪ ಹುಚ್ಚಾಳ್ಯರ, ವೃದ್ಧೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.