ಹಾವೇರಿ:ನನ್ನ ಮಗನಿಗೆ ಉಪದೇಶ ನೀಡುತ್ತಿರುವ ಕಾಂಗ್ರೆಸ್ನ ಡಿ.ಆರ್.ಪಾಟೀಲ್ ಮೊದಲು ತಮ್ಮ ರಾಜಕೀಯ ಹಿನ್ನೆಲೆಯನ್ನ ಪರಾಮರ್ಶೆ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಸಿ.ಎಂ.ಉದಾಸಿ ಸಲಹೆ ನೀಡಿದ್ದಾರೆ.
ನನ್ನ ಮಗನಿಗೆ ಉಪದೇಶ ಮಾಡುವುದು ಬಿಟ್ಟು, ನಿಮ್ಮ ರಾಜಕೀಯ ಹಿನ್ನೆಲೆ ತಿಳಿದುಕೊಳ್ಳಿ: ಸಿ.ಎಂ.ಉದಾಸಿ - undefined
ನನ್ನ ಮಗನಿಗೆ ಉಪದೇಶ ನೀಡುತ್ತಿರುವ ಕಾಂಗ್ರೆಸ್ನ ಡಿ.ಆರ್.ಪಾಟೀಲ್ ಮೊದಲು ತಮ್ಮ ರಾಜಕೀಯ ಹಿನ್ನೆಲೆಯನ್ನ ಪರಾಮರ್ಶೆ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಸಿ.ಎಂ.ಉದಾಸಿ ಸಲಹೆ ನೀಡಿದ್ದಾರೆ.
ಸಿ.ಎಂ.ಉದಾಸಿ
ಹಾನಗಲ್ನಲ್ಲಿ ಮಾತನಾಡಿದ ಅವರು, ಮಗನ ಹ್ಯಾಟ್ರಿಕ್ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಗೆಲುವಿಗೆ ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜನ, ದೇಶ ಮೊದಲು. ಉಳಿದವು ಆಮೇಲೆ ಅನ್ನೋ ಮನೋಭಾವನೆಯಿಂದ ನರೇಂದ್ರ ಮೋದಿಗೆ ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ರಾಜ್ಯದಲ್ಲಿ ಅಡಳಿತ ವಿರೋಧಿ ಅಲೆ ಇದೆ ಎನ್ನುವುದಕ್ಕೆ ರಾಜ್ಯದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿರುವುದು ಸಾಕ್ಷಿ ಎಂದು ಅಭಿಪ್ರಾಯಪಟ್ಟರು.