ಕರ್ನಾಟಕ

karnataka

ETV Bharat / state

ವಿವಿಧ ಕಾಮಗಾರಿಗಳಿಗೆ ಆರ್.ಶಂಕರ್,ಅರುಣ ಕುಮಾರ್​ ಪೂಜಾರ ಜಂಟಿಯಾಗಿ ಚಾಲನೆ, ಜನರಲ್ಲಿ ಗೊಂದಲ! - PW department

ಲೋಕೋಪಯೋಗಿ ಇಲಾಖೆ ವತಿಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಇಂದು ಅನರ್ಹ ಶಾಸಕ ಆರ್.ಶಂಕರ್​ ಹಾಗೂ ಶಾಸಕ ಅರುಣ ಕುಮಾರ ಪೂಜಾರ ಜಂಟಿಯಾಗಿ ಚಾಲನೆ ನೀಡಿದರು.

ranebennur
ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಆರ್.ಶಂಕರ್ ಹಾಗೂ ಅರುಣ ಕುಮಾರ್​ ಪೂಜಾರ

By

Published : Dec 27, 2019, 3:04 PM IST

ರಾಣೆಬೆನ್ನೂರು:ಲೋಕೋಪಯೋಗಿ ಇಲಾಖೆ ವತಿಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಇಂದು ಅನರ್ಹ ಶಾಸಕ ಆರ್.ಶಂಕರ್​ ಹಾಗೂ ಶಾಸಕ ಅರುಣ ಕುಮಾರ ಪೂಜಾರ ಜಂಟಿಯಾಗಿ ಚಾಲನೆ ನೀಡಿದರು.

ತಾಲೂಕಿನ ಮಾಕನೂರ, ಮಾಗೋಡ, ಬಸಲಿಕಟ್ಟಿ ತಾಂಡ, ಚೌಡಯ್ಯನದಾನಪುರ, ಹೀಲದಳ್ಳಿ, ಬೇವಿನಹಳ್ಳಿ ಸೇರಿದಂತೆ ಸುಮಾರು 10 ಗ್ರಾಮಗಳಲ್ಲಿ ಅಂದಾಜು 20 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದರು.

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಆರ್.ಶಂಕರ್ ಹಾಗೂ ಅರುಣ ಕುಮಾರ್​ ಪೂಜಾರ

ಶಾಸಕ ಅರುಣ್​ ಕುಮಾರ ಪೂಜಾರ ನೇತೃತ್ವದಲ್ಲಿ ನಡೆಯಬೇಕಾದ ಚಾಲನೆಗೆ ಅನರ್ಹ ಶಾಸಕ ಆರ್.ಶಂಕರ ಕೂಡ ಭಾಗಿಯಾಗಿ ಚಾಲನೆ ನೀಡುತ್ತಿದ್ದರು. ಇದರಿಂದ ಗ್ರಾಮದ ಜನರು ಆರ್.ಶಂಕರ ಶಾಸಕರೋ ಅಥವಾ ಅರುಣ ಕುಮಾರ ‌ಪೂಜಾರ ಶಾಸಕರೋ ಎಂಬ ಗೊಂದಲಕ್ಕೆ ಒಳಗಾದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ವಿಶ್ವನಾಥ ಪಾಟೀಲ್, ಮಂಜುನಾಥ, ಚೊಳಪ್ಪ ಕಸವಾಳ, ನಾಗರಾಜ ಭಾಗಿಯಾಗಿದ್ದರು.

ABOUT THE AUTHOR

...view details