ರಾಣೆಬೆನ್ನೂರು: ಮೆಕ್ಕೆಜೋಳ ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಹನುಮನಮಟ್ಟಿ ಬಳಿ ನಡೆದಿದೆ.
ಟ್ರಾಕ್ಟರ್ನಲ್ಲಿದ್ದ ರಮೇಶ (38) ಮತ್ತು ರಮೇಶ ಲಮಾಣಿ (29) ಗಾಯಗೊಂಡ ವ್ಯಕ್ತಿಗಳು.

ಮೆಕ್ಕೆಜೋಳ ಮಾರಾಟ ಮಾಡಲು ರಮೇಶ ಟ್ರಾಕ್ಟರ್ನಲ್ಲಿ ರಾಣೆಬೆನ್ನೂರು ನಗರಕ್ಕೆ ಬರುತ್ತಿದ್ದರು. ಈ ನಡುವೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹಿಂಬದಿಯಲ್ಲಿ ಲಾರಿ ಬಂದು ಡಿಕ್ಕಿಯಾಗಿದೆ. ಪರಿಣಾಮ ಟ್ರಾಕ್ಟರ್ ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಟ್ರಾಕ್ಟರ್ ಒಳಗೆ ಇದ್ದ ವ್ಯಕ್ತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕುರಿತಂತೆ ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.