ಹಾವೇರಿ:ಜಮೀನು ವಿವಾದ ಹಿನ್ನೆಲೆಯಲ್ಲಿ ದಾಯಾದಿಗಳ ನಡುವೆ ಕಲಹ ಉಂಟಾಗಿದೆ. ಎರಡು ಕುಟುಂಬಗಳ ಸದಸ್ಯರ ನಡುವೆ ಮಾರಾಮಾರಿ ನಡೆದಿರುವ ಹಾನಗಲ್ ತಾಲೂಕಿನ ಬ್ಯಾತನಾಳ ಗ್ರಾಮದಲ್ಲಿ ನಡೆದಿದೆ.
ಹೊಡೆದಾಟದಲ್ಲಿ ಎರಡು ಕುಟುಂಬಗಳ ಸದಸ್ಯರು ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದ ಕೋಟ್ನಿಕಲ್ಮಣ ಮತ್ತು ಹಲಕಣ್ಣವರ್ ಕುಟುಂಬದ ನಡುವೆ ಈ ಮಾರಾಮಾರಿ ನಡೆದಿದೆ.
ಕುಟುಂಬಗಳ ಜಮೀನು ವಿವಾದ ನ್ಯಾಯಾಲಯದಲ್ಲಿದೆ. ತಮಗೇ ಜಮೀನಿನಲ್ಲಿ ಹೆಚ್ಚು ಪಾಲು ಬರಬೇಕೆಂದು ಈ ಎರಡು ಕುಟುಂಬಗಳ ಸದಸ್ಯರು ಕಿತ್ತಾಡಿಕೊಂಡರು. ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗಿ ರಕ್ತ ಬರುವಷ್ಟರ ಮಟ್ಟಿಗೆ ಹೊಡೆದಾಡಿಕೊಂಡಿದ್ದಾರೆ.
ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಎರಡು ಕುಟುಂಬಗಳ ಸದಸ್ಯರು ಹೊಡೆದಾಡಿಕೊಂಡಿರುವ ದೃಶ್ಯಗಳು ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ.