ಕರ್ನಾಟಕ

karnataka

ETV Bharat / state

ರುದ್ರಪ್ಪ ಲಮಾಣಿ ವಿರುದ್ಧ ಅಸಂಬದ್ಧ ಹೇಳಿಕೆ: ಶಾಸಕ ಓಲೇಕಾರ್​ ವಿರುದ್ಧ ಪ್ರತಿಭಟನೆ - Rudrappa Lamani

ಮಾಜಿ ಶಾಸಕ ರುದ್ರಪ್ಪ ಲಮಾಣಿಯವರ ರಾಜಕೀಯ ಬೆಳವಣಿಗೆ ಸಹಿಸಲಾರದೆ ಶಾಸಕ ನೆಹರು ಓಲೇಕಾರ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಬಂಜಾರ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.

dsd
ಶಾಸಕ ಓಲೇಕಾರ್​ ವಿರುದ್ಧ ಪ್ರತಿಭಟನೆ

By

Published : Nov 10, 2020, 1:49 PM IST

ರಾಣೆಬೆನ್ನೂರು: ಶಾಸಕ ನೆಹರು ಓಲೇಕಾರ್​ ಅವರು ಮಾಜಿ ಶಾಸಕ ರುದ್ರಪ್ಪ ಲಮಾಣಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿದ್ದರು ಎಂಬ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಬಂಜಾರ ಸಮುದಾಯದ ಮುಖಂಡರು ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಶಾಸಕ ಓಲೇಕಾರ್​ ವಿರುದ್ಧ ಪ್ರತಿಭಟನೆ

ನೆಹರು ಓಲೇಕಾರ್​ ಓರ್ವ ಜನಪ್ರತಿನಿಧಿಯಾಗಿ ಹೆಣ್ಣು ಮಕ್ಕಳ ಮಾರಾಟ ಎಂಬ ಪದ ಬಳಸುತ್ತಿರುವುದು ಹೆಣ್ಣು ಕುಲಕ್ಕೆ ಅವಮಾನ. ಅವರು ರಾಜಕೀಯವಾಗಿ ಚರ್ಚೆ ಮಾಡಲಿ, ಅದನ್ನು ಬಿಟ್ಟು ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ. ರುದ್ರಪ್ಪ ಲಮಾಣಿ ಮಗ ತಪ್ಪು ಮಾಡಿದ್ದರೆ ಕಾನೂನು ಕ್ರಮಕೈಗೊಳ್ಳುತ್ತದೆ ಎಂದರು.

ಶಾಸಕ ನೆಹರು ಓಲೇಕಾರ್​ ದಾಖಲೆ ಸಮೇತ ತಾವು ಮಾಡಿರುವ ಆರೋಪವನ್ನು ಸಾಬೀತುಪಡಿಸಬೇಕು. ಇಲ್ಲವಾದರೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ರಾಮಣ್ಣ ನಾಯಕ ಸವಾಲು ಹಾಕಿದರು.

ಅಲ್ಲದೇ ನೆಹರು ಓಲೇಕಾರ್​ ಹೇಳಿಕೆಯನ್ನು ವಾಪಸ್​ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಬಂಜಾರ ಸಮುದಾಯದಿಂದ ರಾಜ್ಯಾದ್ಯಂತ ಬೃಹತ್ ಪ್ರತಿಭಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.

ABOUT THE AUTHOR

...view details