ಹಾವೇರಿ: ಅತ್ತಿಗೆಯನ್ನು ಹೊಡೆದು ಕೊಲೆ ಮಾಡಿ ಬಳಿಕ ನಾದಿನಿ ನೇಣಿಗೆ ಶರಣಾದ ಘಟನೆ ಶಿಗ್ಗಾವಿಯ ಮ್ಯಾಗೇರಿ ಓಣಿಯಲ್ಲಿ ನಡೆದಿದೆ. ಜಯಶ್ರೀ ಪಾಟೀಲ (66) ಕೊಲೆಯಾದ ಅತ್ತಿಗೆಯಾಗಿದ್ದು, ಮಂಜುಳಾ ಪಾಟೀಲ (50) ಕೊಲೆ ಮಾಡಿ ನೇಣಿಗೆ ಶರಣಾಗಿರುವ ನಾದಿನಿ.
ಮಂಜುಳಾ ಮನೆಯಲ್ಲಿದ್ದ ಸುತ್ತಿಗೆಯಿಂದ ಜಯಶ್ರಿ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ. 'ಪೊಲೀಸರೊಂದಿಗೆ ನಾಲ್ಕು ಜನ ಊರವರನ್ನು ಕರೆದುಕೊಂಡು ಬಾಗಿಲು ಒಡೆದು ಒಳಗೆ ಬನ್ನಿರಿ' ಅಂತ ಬರೆದ ಹಾಳೆಯನ್ನು ಬಾಗಿಲಿಗೆ ನೇತು ಹಾಕಿ ಮಂಜುಳಾ ನೇಣಿಗೆ ಶರಣಾಗಿದ್ದಾಳೆಂದು ತಿಳಿದುಬಂದಿದೆ.