ಹಾವೇರಿ:ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಕುರುಬ ಸಮುದಾಯದವರು ಪ್ರತಿಭಟನೆ ನಡೆಸಿದರು. ರಾಣೆಬೆನ್ನೂರು ನಗರದ ಕೋರ್ಟ್ ವೃತ್ತದ ಬಳಿ ಮಾಧುಸ್ವಾಮಿಯವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿದರು.
'ಕನಕ' ವೃತ್ತ ಗೊಂದಲ: ಮಾಧುಸ್ವಾಮಿಯನ್ನು ಸಂಪುಟದಿಂದ ಕೈ ಬಿಡಲು ಆಗ್ರಹ - ಮಾಧುಸ್ವಾಮಿಯನ್ನು ಸಂಪುಟದಿಂದ ಕೈ ಬಿಡಲ ಕುರುಬ ಸಮುದಾಯ ಆಗ್ರಹ
ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಕುರುಬ ಸಮುದಾಯದವರು ಪ್ರತಿಭಟನೆ ನಡೆಸಿದರು. ರಾಣೆಬೆನ್ನೂರು ನಗರದ ಕೋರ್ಟ್ ವೃತ್ತದ ಬಳಿ ಮಾಧುಸ್ವಾಮಿಯವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿದರು.
ಕುರುಬ ಸಮುದಾಯದವರ ಪ್ರತಿಭಟನೆ
ಸಚಿವರು ಹುಳಿಯಾರಿನ ಕನಕದಾಸರ ವೃತ್ತದ ವಿವಾದವನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಹಾಗೂ ಶಾಂತಿ ಸಭೆಯಲ್ಲಿಯೂ ಕೂಡ ಸಮುದಾಯದ ಶ್ರೀಗಳ ಬಗ್ಗೆ ಸೌಜನ್ಯ ತೋರದೆ ಏಕವಚನದಲ್ಲಿ ಮಾತನಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಅಸಂಬದ್ಧ ಮಾತನಾಡಿದ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು. ಹಾಗೂ ಅವರನ್ನು ಉಚ್ಛಾಟನೆ ಮಾಡುವಂತೆ ರಾಜ್ಯಪಾಲರಿಗೆ ಮನವಿ ಕೂಡ ಸಲ್ಲಿಸಿದ್ದಾರೆ.