ಹಾನಗಲ್: ಕುಮಾರಸ್ವಾಮಿ ಒಬ್ಬ ಅಪಕ್ವ ರಾಜಕಾರಣಿ. ಮನಸ್ಸಿಗೆ ಬಂದಂತೆ ಮಾತನಾಡ್ತಾರೆ. ಇವರಿಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರೋ ಶಕ್ತಿ ಇಲ್ಲ ಎಂದು ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಹೆಚ್ಡಿಕೆ ವಿರುದ್ಧ ಹರಿಹಾಯ್ದರು.
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ನಡೆದ ಕಾರ್ಯಕರ್ತರ ಸಭೆ ನಂತರ ಮಾತನಾಡಿದ ಅವರು, ಕುಮಾರಸ್ವಾಮಿ ಕಾಂಗ್ರೆಸ್ ಜೊತೆಗೂ ಅಧಿಕಾರ ಮಾಡ್ತಾರೆ, ಬಿಜೆಪಿ ಜೊತೆಗೂ ಅಧಿಕಾರ ಮಾಡ್ತಾರೆ. ಹಿಂದೆ ಬಿಜೆಪಿಯ ಯಡಿಯೂರಪ್ಪ ಜೊತೆಗೂ ಟ್ವೆಂಟಿ ಟ್ವೆಂಟಿ ಸರ್ಕಾರ ಮಾಡಿದ್ರು. ಕೊನೆಗೆ ಯಡಿಯೂರಪ್ಪಗೆ ಅಧಿಕಾರ ಬಿಟ್ಟು ಕೊಡದೆ ಮೋಸ ಮಾಡಿದ್ರು ಎಂದು ಟೀಕಿಸಿದರು.