ಕರ್ನಾಟಕ

karnataka

ETV Bharat / state

'ಕಾಂಗ್ರೆಸ್ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಡಿಕೆಶಿ, ಸಿದ್ದರಾಮಯ್ಯ ಸ್ಪಷ್ಟನೆ ನೀಡಲಿ' - ಸಲೀಂ ಮತ್ತು ಉಗ್ರಪ್ಪ ಪಿಸುಮಾತು

ಸಲೀಂ ಮತ್ತು ಉಗ್ರಪ್ಪನವರ ಪಿಸುಮಾತಿನ ಘಟನೆಯ ಬಗ್ಗೆ ಡಿಕೆಶಿ ತಮಗಾದ ನೋವು ಒಪ್ಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಮೇಲೆ ನೇರವಾಗಿ, ಬಹಿರಂಗವಾಗಿ ಆಪಾದನೆಗಳನ್ನು ಮಾಡ್ತಿದ್ರೂ ಸಿದ್ದರಾಮಯ್ಯ ಯಾಕೆ ಖಂಡನೆ ಮಾಡಲಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ

By

Published : Oct 27, 2021, 8:35 AM IST

ಹಾವೇರಿ: ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ಮತ್ತು ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.

ಹಾನಗಲ್​ನಲ್ಲಿ ಮಾತನಾಡಿದ ಅವರು, ಸಲೀಂ ಮತ್ತು ಉಗ್ರಪ್ಪನವರ ಪಿಸುಮಾತಿನ ಬಗ್ಗೆ ಡಿಕೆಶಿ ತಮಗಾದ ನೋವು ಒಪ್ಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಮೇಲೆ ನೇರವಾಗಿ, ಬಹಿರಂಗವಾಗಿ ಆಪಾದನೆಗಳನ್ನು ಮಾಡ್ತಿದ್ರೂ ಸಿದ್ದರಾಮಯ್ಯ ಯಾಕೆ ಖಂಡನೆ ಮಾಡ್ಲಿಲ್ಲ. ಸಿದ್ದರಾಮಯ್ಯ ಅವರೇ ಹೇಳಿ ಮಾಡಿಸಿದರೋ? ಇವರ ಆಂತರಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ಹೊರಗೆ ಬಂದಾಗ ಪ್ರತಿಕ್ರಿಯೆ ಕೊಡಬೇಕು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ಮೇಲೆ ಸಿದ್ದರಾಮಯ್ಯ ಅವರಿಗೆ ಆ ಮಾತಿನ ಬಗ್ಗೆ ಒಪ್ಪಿಗೆ ಇತ್ತಾ ಎಂಬ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದರು.

ಹಾನಗಲ್​ನಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ

ನಾವು ಅಲ್ಪಸಂಖ್ಯಾತರ ಉದ್ಧಾರಕರು ಅಂತಾ ಹೇಳ್ತಿದ್ದಾರೆ. ಬರಿ ಸಲೀಂ ಮೇಲೆ ಯಾಕೆ ಕ್ರಮ ತೆಗೆದುಕೊಂಡಿರಿ, ಸ್ಪಷ್ಟನೆ ಕೊಡಿ. ಇಡೀ ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಅನ್ನೋ ಚರ್ಚೆ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿದೆ. ಡಿಕೆಶಿ, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್​ ಮುಂದಿನ ಸಿಎಂ ನಾವೇ ಅಂತಿದ್ದಾರೆ. ಕಾಂಗ್ರೆಸ್​​ ಸ್ಪಷ್ಟನೆ ನೀಡಲಿ ಎಂದು ಸವಾಲೆಸೆದರು.

ಹಾನಗಲ್ ಮತ್ತು ಸಿಂದಗಿಯಲ್ಲಿ ಬಿಜೆಪಿ ಗೆದ್ದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಲ್ಲೋಲ ಕಲ್ಲೋಲ ಆಗಲಿದೆ. ಸದ್ಯದಲ್ಲೇ ಕಾಂಗ್ರೆಸ್ ಪಕ್ಷ ಎರಡು ಭಾಗವಾಗಿ ಒಡೆಯಲಿದೆ ಎಂದು ಭವಿಷ್ಯ ನುಡಿದರು.

ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ಯಾವುದೇ ಬೇರೆ ಪಕ್ಷದ ಅವಶ್ಯಕತೆ ಇಲ್ಲ. ಬರುವ ಚುನಾವಣೆಯಲ್ಲೂ ಸ್ವತಂತ್ರವಾಗಿಯೇ ಇರ್ತೇವೆ ಎಂದರು. ಕಂಬಳಿ ವಿಚಾರವಾಗಿ ಮಾತನಾಡಿ, ಕಂಬಳಿಗೆ ಬಹಳ ಪಾವಿತ್ರ್ಯತೆ ಇದೆ. ಕಂಬಳಿಯನ್ನು ಗದ್ದುಗೆ, ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಸಿದ್ದರಾಮಯ್ಯ ಕಂಬಳಿಯನ್ನು ರಾಜಕಾರಣಕ್ಕೆ ಬಳಸ್ತಿರೋದು ನೋವು ತಂದಿದೆ. ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details