ಹಾವೇರಿ:ರಾಜ್ಯ ಬಿಜೆಪಿ ಸರ್ಕಾರ ಸತ್ತುಹೋಗಿದೆ. ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಇದನ್ನೂ ಓದಿ: ಮೋದಿ ಮಾದರಿಯಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಸಿಎಂ ಬಿಎಸ್ವೈ ಚಿಂತನೆ
ಹಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ಹಲವು ಆಸೆಗಳನ್ನು ತೋರಿಸಿದ್ದರು. ಯುವಕರಿಗೆ ಎರಡು ಕೋಟಿ ಉದ್ಯೋಗ ಸೃಷ್ಠಿ, ಕಪ್ಪು ಹಣ ವಾಪಸ್ಸಾತಿ ಹಾಗೂ ಪ್ರತಿಯೊಬ್ಬನ ಅಕೌಂಟಿಗೆ 15 ಲಕ್ಷ ರೂ. ಹಾಕುವುದು ಸೇರಿದಂತೆ ಹತ್ತಾರು ಭರವಸೆಗಳನ್ನು ನೀಡಿದ್ದರು. ಆದರೆ, 14 ಕೋಟಿ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆಯೇ ವಿನಃ ಅವರ ಯಾವುದೇ ಭರವಸೆ ಹಾಗೂ ಕೊಟ್ಟ ಮಾತುಗಳು ಈಡೇರಿಲ್ಲ ಎಂದು ಮೋದಿ ಆಡಳಿತವನ್ನು ಟೀಕಿಸಿದರು.
ವಿಶ್ವದಲ್ಲಿ ಸುಳ್ಳು ಹೇಳುವವರಿಗೆ ಆಸ್ಕರ್ ಆವಾರ್ಡ್ ನೀಡುವುದಾದರೆ ನರೇಂದ್ರ ಮೋದಿಗೆ ನೀಡಬೇಕೆಂದು ವ್ಯಂಗ್ಯವಾಡಿದ ಸಲೀಂ ಅಹ್ಮದ್, ಮೋದಿ ಪ್ರತೀ ಮಾತು ಮಾತಿಗೆ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಜನರಿಗೆ ಸ್ವರ್ಗ ತೋರಿಸುತ್ತೇನೆ ಎಂದಿದ್ದರು. ಆದರೆ, ಜನ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.
ಚಾಮರಾಜನಗರದಲ್ಲಿ ನಡೆದ ದುರ್ಘಟನೆಯನ್ನು ಪ್ರಸ್ತಾಪಿಸಿದ ಅವರು, ಆ ದುರಂತಕ್ಕೆ ಇಲ್ಲಿನ ಸರ್ಕಾರವೇ ಕಾರಣ. ಸರ್ಕಾರವೇ ಅವರನ್ನ ಕೊಲೆ ಮಾಡಿದೆ ಎಂದರು.
ಸಿಎಂ ಅಭ್ಯರ್ಥಿ ಚರ್ಚೆ ಅಪ್ರಸ್ತುತ
ಕಾಂಗ್ರೆಸ್ ಪಕ್ಷದಲ್ಲಿ ಭವಿಷ್ಯದ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಎದ್ದಿರುವ ಚರ್ಚೆ ಅಪ್ರಸ್ತುತ. ನಮ್ಮ ಪಕ್ಷದಲ್ಲಿ ಒಗ್ಗಟ್ಟಿದೆ. ಸಾಮೂಹಿಕ ನಾಯಕತ್ವದಲ್ಲಿ ಬರುವ ಚುನಾವಣೆ ನಡೆಯಲಿದ್ದು ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಸತ್ಯ. ಬಳಿಕ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿ ಮುಖ್ಯಮಂತ್ರಿ ಆಗುತ್ತಾರೆ. ಈಗಲೇ ಭವಿಷ್ಯದ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಮಾತನಾಡುವುದು ತಪ್ಪು. ಈ ಬಗ್ಗೆ ಹೇಳಿಕೆ ನೀಡದಂತೆ ನಮ್ಮ ನಾಯಕರು ಈಗಾಗಲೇ ತಿಳಿಸಿದ್ದಾರೆ ಎಂದರು.
ಇದನ್ನೂ ಓದಿ: ಡ್ಯಾಂ ಪರಿಸ್ಥಿತಿ ಬಗ್ಗೆ ಅಧಿಕಾರಿಗಳು ಹೇಳ್ಬೇಕು, ಇದ್ರಲ್ಲಿ ರಾಜಕಾರಣಿಗಳಿಗೆ ಕೆಲಸ ಏನಿದೆ?: ಡಿಕೆಶಿ
ಇನ್ನು ಕಾಂಗ್ರೆಸ್ ತತ್ವ-ಸಿದ್ಧಾಂತ ಹಾಗೂ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ನಾಯಕತ್ವ ಬೆಂಬಲಿಸಿ ಕಾಂಗ್ರೆಸ್ಸಿಗೆ ಬರುವ ನಾಯಕರಿಗೆ ಕಾಂಗ್ರೆಸ್‌ನಲ್ಲಿ ಸ್ವಾಗತವಿದೆ. ಇದಕ್ಕಾಗಿ ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು ಅದರ ಮೂಲಕ ಪಕ್ಷಕ್ಕೆ ಸೇರಿಸಿಕೊಳ್ಳಬಹುದು ಎಂದು ಸಲೀಂ ಅಹ್ಮದ್ ತಿಳಿಸಿದರು.